ಹುಬ್ಬಳ್ಳಿ:ಸಾರಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ರೋಗ ನಿರೋಧಕ ಹೋಮಿಯೋಪತಿ ಮಾತ್ರೆಗಳನ್ನು ಜಿಲ್ಲಾ ಆಯುಷ್ ಇಲಾಖೆ, ಡಾ. ಬಿ.ಡಿ.ಜತ್ತಿ ಹೋಮಿಯೋಪತಿ ಮೆಡಿಕಲ್ ಕಾಲೇಜು, ಜಿಲ್ಲಾ ಆಯುಷ್ ಫೆಡರೇಷನ್ ವತಿಯಿಂದ ನೀಡಲಾಯಿತು.
ನಗರ ಸಾರಿಗೆ ಒಂದನೇ ಘಟಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ ಅವರಿಗೆ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಸಂಗಮೇಶ. ಕಲಹಾಳ ಆರ್ಸೆನಿಕಂ ಆಲ್ಬಮ್-30 ಮಾತ್ರೆಗಳನ್ನು ಹಸ್ತಾಂತರಿಸಿದರು.
ನಂತರ ಎಪಿಎಂಸಿ ಆವರಣದಲ್ಲಿನ ಅಗ್ನಿಶಾಮಕ ಕಚೇರಿಯಲ್ಲಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಕೆ.ಶ್ರೀಕಾಂತ್ ಅವರಿಗೆ ಮಾತ್ರೆಗಳನ್ನು ಹಸ್ತಾಂತರಿಸಿದರು. ಆರ್ಸೆನಿಕಂ ಆಲ್ಬಮ್-30 ಮಾತ್ರೆಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಾತ್ರೆಗಳನ್ನು ಜಾಗರೂಕತೆಯಿಂದ ಸೇವಿಸಬೇಕು. 12 ವರ್ಷ ಮೇಲ್ಪಟ್ಟವರು ದಿನವೊಂದಕ್ಕೆ 6 ಮಾತ್ರೆಗಳನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಮೂರು ದಿನಗಳ ಕಾಲ ತೆಗೆದುಕೊಳ್ಳಬೇಕು.
12 ವರ್ಷಕ್ಕಿಂತ ಕಡಿಮೆ ವಯೋಮಾನದವರು 4 ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದು ಮಾಹಿತಿ ನೀಡಲಾಯಿತು.