ಹುಬ್ಬಳ್ಳಿ:ಕೊರೊನಾ ಲಾಕ್ಡೌನ್ ಹಿನ್ನೆಲೆ ದೇಶದ ಎಲ್ಲಾ ದೇವಾಲಯಗಳು ಬಂದ್ ಆಗಿವೆ. ಈ ಹಿನ್ನೆಲೆ ದೇವಾಲಯದ ಅರ್ಚಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ಬಡ ಪುರೋಹಿತರಿಗೆ ದಿನಸಿ ಕಿಟ್ ವಿತರಣೆ - INTUC
ಕೊರೊನಾ ಲಾಕ್ಡೌನ್ನಿಂದಾಗಿ ಸಮಸ್ಯೆಗೆ ಒಳಗಾಗಿರುವ ನಾಗರಿಕರಿಗೆ ದಿನಸಿ ಕಿಟ್ ನೀಡಿ ನೆರವು ನೀಡಿಲಾಗುತ್ತಿದೆ. ಇದೇ ರೀತಿ ಹುಬ್ಬಳ್ಳಿಯ ನವನಗರ ಬಡಾವಣೆಯ ಈಶ್ವರ ದೇವಾಲಯದ ಬಡ ಪುರೋಹಿತರಿಗೆ ದಿನಸಿ ಕಿಟ್ ವಿತರಿಸಲಾಯಿತು.
ಈ ಹಿಂದೆ ಮದುವೆ ಕಾರ್ಯ, ದೇವಾಲಯ ಪೂಜೆ ಹಾಗೂ ತಿಥಿ ಕಾರ್ಯಗಳಲ್ಲಿ ಅರ್ಚಕರು ಜೀವನೋಪಾಯಕ್ಕೆ ದುಡಿಮೆ ಮಾಡಿಕೊಳ್ಳುತ್ತಿದ್ದರು. ಆದರೆ ಲಾಕ್ಡೌನ್ನಿಂದಾಗಿ ಎಲ್ಲಾ ಕಾರ್ಯಗಳು ಬಂದ್ ಆಗಿವೆ. ಇದನ್ನು ಅರಿತ ಧಾರವಾಡ ಜಿಲ್ಲಾ INTUC ಅಧ್ಯಕ್ಷರು ಹಾಗೂ ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾ ಅಧ್ಯಕ್ಷ ಬಂಗಾರೇಶ ಹಿರೇಮಠರ ನೇತೃತ್ವದಲ್ಲಿ ನವನಗರ ಬಡಾವಣೆಯ ಈಶ್ವರ ದೇವಸ್ಥಾನದಲ್ಲಿ ಬಡ ಪುರೋಹಿತರಿಗೆ ದಿನಸಿ ಕಿಟ್ ವಿತರಿಸಿದ್ದಾರೆ.
ಅಲ್ಲದೆ ಇದೇ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು, ಸುಚಿತ್ವ ಕಾಪಾಡಿಕೊಳ್ಳುವುದರ ಕುರಿತು ಜಾಗೃತಿ ಮೂಡಿಸಲಾಯಿತು.