ಧಾರವಾಡ:ವೀರಶೈವ ಲಿಂಗಾಯತ ಬೇರೆ ಮಾಡಬೇಕೆಂದು ಪ್ರಯತ್ನಿಸಿದವರಿಗೆ ಸರಿಯಾಗಿ ಮಂಗಳಾರತಿಯಾಗಿದೆ. ಈ ಮೊದಲು 100 ವೀರಶೈವ ಶಾಸಕರು ಇರುತ್ತಿದ್ದರು. ಆದರೆ ಸಿದ್ದರಾಮಯ್ಯನವರ ರಾಜಕಾರಣದಲ್ಲಿ ಈ ಸಂಖ್ಯೆಯನ್ನು 44 ಕ್ಕೆ ಇಳಿಸಿದ್ದರು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಧ್ಯಕ್ಷ ಎನ್ ತಿಪ್ಪಣ್ಣ ಹೇಳಿದ್ದಾರೆ.
ಧರ್ಮ ಒಡೆದವರಿಗೆ ಮಂಗಳಾರತಿಯಾಗಿದೆ: ಎನ್ ತಿಪ್ಪಣ್ಣ - tippanna statement on by election results
ರಾಜ್ಯದಲ್ಲಿ ವೀರಶೈವ ಲಿಂಗಾಯತ ಬೇರೆ ಮಾಡಬೇಕೆಂದು ಯಾರು ಪ್ರಯತ್ನ ಮಾಡುತ್ತಿದ್ದರೊ ಅವರಿಗೆ ಮಂಗಳಾರತಿಯಾಗಿದೆ. ಲಿಂಗಾಯತರು ಒಂದು ಕಾಲಕ್ಕೆ 100 ಶಾಸಕರು ಇರುತ್ತಿದ್ದರು. ನಮ್ಮ ಸಿದ್ದರಾಮಣ್ಣನ ರಾಜಕಾರಣದಲ್ಲಿ ನಮ್ಮನ್ನ 44 ಕ್ಕೆ ಇಳಿಸಿದ್ರು. ಈಗ 56 ಆಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಧ್ಯಕ್ಷ ಎನ್ ತಿಪ್ಪಣ್ಣ ಹೇಳಿದರು.
ಧಾರವಾಡದ ಲಿಂಗಾಯತ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಲೆಕ್ಕದ ಪ್ರಕಾರ ನಮ್ಮ ಜನಸಂಖ್ಯೆ 2 ಕೋಟಿ ಅಂತಾ ಮೊದಲು ನಾವು ಹೇಳಿದ್ವಿ. ಎಲ್ಲರೂ ಅದು ಸರಿ ಇಲ್ಲ ಅಂತಾ ಹೇಳಿದ್ದರು. ಒಳಪಂಗಡ, ಪಂಚಮಸಾಲಿ, ವಿರಕ್ತರು, ರೆಡ್ಡಿಯರು ಬೇರೆ ಬೇರೆ ಅಂತ ಮಾಡಿ 65 ಲಕ್ಷಕ್ಕೆ ತಂದಿದ್ದಾರೆ ಎಂದು ಹರಿಹಾಯ್ದರು.
ನಮ್ಮ ಜನಸಂಖ್ಯೆ ಕಡಿಮೆ ಮಾಡಿದ್ದ ಕಾರಣ, ಒಂದನೇ ಸ್ಥಾನದಲ್ಲಿದ್ದ ನಮ್ಮನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ರು. ನಾವು ನಮ್ಮ ಜನಗಳಲ್ಲಿ ಏನಾದ್ರು ಕಲ್ಮಶ ಇದ್ರೆ ತಗಿಬೇಕು ಅಂತಾ ಎಲ್ಲ ಕಡೆ ಓಡಾಡುತ್ತಿದ್ದೇವೆ. ಸ್ವಾರ್ಥ ರಾಜಕಾರಣಕ್ಕಾಗಿ ಧರ್ಮ ಒಡೆಯುವುದು ತಪ್ಪು ಎಂದು ತಿಳಿಸಲು ನಾವು ಎಲ್ಲ ಕಡೆ ಓಡಾಡಿದ್ವಿ. ಸದ್ಯ ಈಗ ಎಲ್ಲ ನೆಮ್ಮದಿಯಾಗಿದೆ ಎಂದು ತಿಪ್ಪಣ್ಣ ತಿಳಿಸಿದರು.