ಧಾರವಾಡ: ಪಾಲಕರ ಪ್ರೋತ್ಸಾಹದಿಂದಲೇ ಬೆಳೆದ ಕ್ರೀಡಾಪಟುವೊಬ್ಬರು ಬ್ರೆಜಿಲ್ ನಲ್ಲಿ ನಡೆಯುವ ಡೆಫ್ ಒಲಿಂಪಿಕ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಧಾರವಾಡದ ಸರ್ಕಾರಿ ಮಹಿಳಾ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿ ನಿಧಿ ಸುಲಾಖೆ ಡೆಫ್ ಒಲಿಂಪಿಕ್ ನಲ್ಲಿ ಸ್ಪರ್ಧಿಸುತ್ತಿದ್ದಾರೆ.
ಇದೇ ಮೇ 1ರಿಂದ ಬ್ರೆಜಿಲ್ ದೇಶದಲ್ಲಿ ಕಿವಿ ಕೇಳದವರಿಗಾಗಿ ಆಯೋಜಿಸಿರುವ ಡೆಫ್ ಒಲಂಪಿಕ್ ನಲ್ಲಿ ಟೈಕಾಂಡೋ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿಯೇ ನಿಧಿ, ಸಾಮಾನ್ಯ ಸ್ಪರ್ಧಿಗಳೊಂದಿಗೆ ಸೆಣಸಾಡಿ ಒಳ್ಳೆಯ ಶ್ರೇಯಾಂಕ ಪಡೆದುಕೊಂಡಿದ್ದು, ಅದರ ಆಧಾರದ ಮೇಲೆಯೇ ಈಗ ವಿಶ್ವಮಟ್ಟದ ಡೆಫ್ ಒಲಂಪಿಕ್ ಗೆ ಆಯ್ಕೆಯಾಗಿದ್ದಾರೆ.