ಕರ್ನಾಟಕ

karnataka

ETV Bharat / city

ಅಪಘಾತ ಪ್ರಕರಣ : ಒಂದೇ ಚಿತೆಯಲ್ಲಿ ಮೂವರ ಅಂತ್ಯ ಸಂಸ್ಕಾರ, ಕುಟುಂಬಸ್ಥರ ಆಕ್ರಂದನ - dharwad road accident

ಧಾರವಾಡದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಒಂದೇ ಕುಟುಂಬದ ಮೂವರನ್ನು ಒಂದೇ ಚಿತೆಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು..

dharwad road accident Funeral of the trio in a single pile
ಒಂದೇ ಚಿತೆಯಲ್ಲಿ ಮೂವರ ಅಂತ್ಯ ಸಂಸ್ಕಾರ ಕುಟುಂಬಸ್ಥರ ಆಕ್ರಂದನ

By

Published : May 21, 2022, 3:36 PM IST

ಧಾರವಾಡ :ಮದುವೆ ನಿಶ್ವಿತಾರ್ಥ ಮುಗಿಸಿಕೊಂಡು ತೆರಳುತ್ತಿದ್ದ ವೇಳೆ ಬಾಡ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಚಿತೆಯಲ್ಲಿ ಮೂವರ ಅಂತ್ಯಕ್ರಿಯೆ ಮಾಡಲಾಗಿದೆ. ನಿಗದಿ ಗ್ರಾಮದ ಮಧುಶ್ರೀ, ಶಿಲ್ಪಾ ಮತ್ತು ಹರೀಶ್ ಎಂಬ ಮೂವರ ಅಂತ್ಯಕ್ರಿಯೆಯನ್ನು ಒಂದೇ ಚಿತೆಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.

ನಿಗದಿ ಹೊರವಲಯದ ರುದ್ರ ಭೂಮಿಯಲ್ಲಿ ಅಂತಿಮ‌ ವಿಧಿವಿಧಾನ ಪೂರೈಸಲಾಯಿತು. ಅಪಘಾತ ಸಂಭವಿಸಿದ ಕೂಡಲೇ ಮೃತಪಟ್ಟ ಕೆಲವರನ್ನು ಧಾರವಾಡ ಜಿಲ್ಲಾಸ್ಪತ್ರೆ ಹಾಗೂ ಹುಬ್ಬಳ್ಳಿ ಕಿಮ್ಸ್​ಗೆ ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ತೆಗೆದುಕೊಂಡು ಹೋಗಲಾಗಿತ್ತು.

ಗ್ರಾಮಕ್ಕೆ ಮೃತದೇಹಗಳು ಆಗಮಿಸುತ್ತಿದ್ದಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತದೇಹ ಕಂಡ ಸಂಬಂಧಿಕರ ಕಣ್ಣಾಲೆಗಳು ಒದ್ದೆಯಾಗಿದ್ದವು. ಇನ್ನು ಬೆನಕನಕಟ್ಟಿ ಗ್ರಾಮದ ಶಂಬುಲಿಂಗಯ್ಯ ಹಿರೇಮಠ ಅವರ ಅಂತಿಮ ಕಾರ್ಯವನ್ನು ಬೆನಕನಕಟ್ಟಿ ರುದ್ರಭೂಮಿಯಲ್ಲಿ ನೆರವೇರಿಸಲಾಗಿದೆ.

ಇದನ್ನೂ ಓದಿ:ಧಾರವಾಡ ಭೀಕರ ಅಪಘಾತದಲ್ಲಿ ಬೆಳಗಾವಿಯ ಬಾಲಕಿ ಸಾವು.. ಹುಟ್ಟೂರಲ್ಲಿ ಅಂತ್ಯಕ್ರಿಯೆ!

ABOUT THE AUTHOR

...view details