ಧಾರವಾಡ: ಸೌಂಡ್ ಮತ್ತು ಲೈಟಿಂಗ್ ಅಳವಡಿಸಲು ಪರವಾನಿಗೆ ನೀಡುವಂತೆ ಆಗ್ರಹಿಸಿ ಹುಬ್ಬಳ್ಳಿ-ಧಾರವಾಡ ಸೌಂಡ್ ಹಾಗೂ ಲೈಟಿಂಗ್ ಮಾಲೀಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಧಾರವಾಡ: ಧ್ವನಿ ವರ್ಧಕ ಬಳಕೆಗೆ ಅನುಮತಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ವಿವಿಧ ಜಿಲ್ಲೆಯ ಮಾಲೀಕರು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಕೊರೊನಾ ವೈರಸ್ ಭೀತಿಯಿಂದ ಆರು ತಿಂಗಳಿಂದ ಕೆಲಸವಿಲ್ಲದೇ ತುಂಬಾ ನಷ್ಟ ಅನುಭವಿಸಿದ್ದೇವೆ. ಈ ವೃತ್ತಿಯನ್ನು ಅವಲಂಬಿಸಿ 12 ಸಾವಿರ ಕುಟುಂಬಗಳಿವೆ. ಆದ್ದರಿಂದ ಅನುಮತಿ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿ, ಇನ್ನೂ ಗಣೇಶ ಮೂರ್ತಿಗಳಿವೆ. ಏಳು, ಒಂಬತ್ತು, ಹನ್ನೊಂದು ದಿನಗಳಿಗೆ ಗಣೇಶ ಮೂರ್ತಿಗಳನ್ನು ನಿಮಜ್ಜನ ಮಾಡಲಾಗುತ್ತಿದೆ. ಅವುಗಳ ಮೆರವಣಿಗೆ ಮಾಡಲು ಧ್ವನಿವರ್ಧಕ ಬಳಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿದರು.