ಧಾರವಾಡ: ಆಸ್ತಿ ವಿವಾದಕ್ಕಾಗಿ ನಗರದ ಕಮಲಾಪುರದಲ್ಲಿ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದ್ದು, ಈ ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಉಮೇಶ ಬಾಳಗಿಯನ್ನು ಆತನ ಸಹೋದರರಾದ ಚೆನ್ನಪ್ಪ ಬಾಳಗಿ (೨೩) ಮತ್ತು ಬಸಪ್ಪ ಬಾಳಗಿ (೨೦) ಮೊನ್ನೆ ಮಧ್ಯಾಹ್ನ ನಡು ರಸ್ತೆಯಲ್ಲೇ ಕೊಲೆ ಮಾಡಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿತ್ತು. ಹಲವು ವರ್ಷಗಳಿಂದ ಎರಡು ಕುಟುಂಬದ ನಡುವೆ 13 ಗುಂಟೆ ಜಾಗದ ವಿಚಾರವಾಗಿ ಜಗಳ ನಡೆಯುತ್ತಿತ್ತು. ಈ ಸಂಘರ್ಷ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ.