ಕರ್ನಾಟಕ

karnataka

By

Published : Dec 27, 2019, 7:05 AM IST

ETV Bharat / city

ಅಂತರ್ಜಾಲ ಆರೋಗ್ಯ ಮಾಹಿತಿಯ ನಿರ್ವಹಣೆ: ಪೇಡಾನಗರಿಗೆ ಅಗ್ರಸ್ಥಾನ

ಪ್ರಸವಪೂರ್ವ ಗರ್ಭಿಣಿಯರ ಆರೋಗ್ಯ, ಜನನ ದರ, ನವಜಾತ ಶಿಶುಗಳ ಪೋಷಣೆ ಸೇರಿದಂತೆ ಮತ್ತಿತರ ಮಾಹಿತಿಯ ನಿರ್ವಹಣೆಯಲ್ಲಿ ಧಾರವಾಡ ಜಿಲ್ಲೆ ರಾಜ್ಯದಲ್ಲಿಯೇ ಅಗ್ರ ಸ್ಥಾನದಲ್ಲಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಲಾಖೆಯ ಡೆಮೊಗ್ರಾಫರ್ ವಿಭಾಗದ ಜಂಟಿ ನಿರ್ದೇಶಕಿ ಪ್ರಮೀಳಾ ಅವರು ಈ ಪುರಸ್ಕಾರ ನೀಡಿ ಗೌರವಿಸಿದ್ದಾರೆ.

dharwad-health-management-information-system
ಅಂತರ್ಜಾಲ ಆರೋಗ್ಯ ಮಾಹಿತಿಯ ನಿರ್ವಹಣೆ

ಧಾರವಾಡ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂತರ್ಜಾಲ ಆಧಾರಿತ ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆಯ (Health Management information System) ಸಂಯುಕ್ತ ಸೂಚ್ಯಂಕದಲ್ಲಿ ಧಾರವಾಡ ಜಿಲ್ಲೆ ಉತ್ತಮ ಸಾಧನೆ ದಾಖಲಿಸುವ ಮೂಲಕ ಪುರಸ್ಕಾರಕ್ಕೆ ಭಾಜನವಾಗಿದೆ.

ಅಂತರ್ಜಾಲ ಆರೋಗ್ಯ ಮಾಹಿತಿಯ ನಿರ್ವಹಣೆಯಲ್ಲಿ ಪೇಡಾನಗರಿಗೆ ಅಗ್ರಸ್ಥಾನ

ಪ್ರಸವಪೂರ್ವ ಗರ್ಭಿಣಿಯರ ಆರೋಗ್ಯ, ಜನನ ದರ, ನವಜಾತ ಶಿಶುಗಳ ಪೋಷಣೆ ಸೇರಿದಂತೆ ಮತ್ತಿತರ ಮಾಹಿತಿಯ ನಿರ್ವಹಣೆಯಲ್ಲಿ ಈ ಜಿಲ್ಲೆ ರಾಜ್ಯದಲ್ಲಿಯೇ ಅಗ್ರ ಸ್ಥಾನದಲ್ಲಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಇಲಾಖೆಯ ಡೆಮೊಗ್ರಾಫರ್ ವಿಭಾಗದ ಜಂಟಿ ನಿರ್ದೇಶಕಿ ಪ್ರಮೀಳಾ ಅವರು ಪುರಸ್ಕಾರ ನೀಡಿ ಗೌರವಿಸಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್, ಡಾ. ಎಸ್. ಎಂ‌‌‌. ಹೊನಕೇರಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯ ಜರುಗಿದೆ.

ABOUT THE AUTHOR

...view details