ಹುಬ್ಬಳ್ಳಿ: ಧಾರವಾಡದಲ್ಲಿ ಮಾ.20ರಂದು ಯಾವುದೇ ಕೋವಿಡ್-19 ಸೊಂಕು ಧೃಡಪಟ್ಟಿಲ್ಲ ಎಂದು ಜಿಲ್ಲಾಧಿಕಾರಿ ದೀಪಾ ಚೊಳನ್ ಹೆಲ್ತ್ ಅವರು ಬುಲೆಟಿನ್ ಬಿಡುಗಡೆಗೊಳಿಸಿದ್ದಾರೆ.
ಕೋವಿಡ್-19: ಧಾರವಾಡದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ - ಜಿಲ್ಲಾಧಿಕಾರಿ ದೀಪಾ ಚೊಳನ್ ಹೆಲ್ತ್
ಆರು ಪ್ರಕರಣಗಳ ರಕ್ತ ಮಾದರಿಯನ್ನು ಲ್ಯಾಬ್ಗೆ ಕಳುಹಿಸಲಾಗಿದೆ. ಅದರಲ್ಲಿ ನಾಲ್ಕು ಮಾದರಿ ನೆಗಿಟಿವ್ ವರದಿ ಬಂದಿದೆ. ಇನ್ನೂ ಇಬ್ಬರ ಫಲಿತಾಂಶ ಬರಬೇಕಿದೆ ಎಂದು ಧಾರವಾಡ ಡಿಸಿ ಮಾಹಿತಿ ನೀಡಿದ್ದಾರೆ.
ಕೋವಿಡ್-19
ಜಿಲ್ಲೆಯಲ್ಲಿ ಇದುವರೆಗೆ 196 ಮಂದಿ ಮೇಲೆ ನಿಗಾ ಇಡಲಾಗಿದ್ದು, ಜೊತೆಗೆ 146 ಜನರಿಗೆ ಹೋಮ್ ಐಸೋಲೇಷನ್ ನೀಡಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆಸ್ಪತ್ರೆಯಲ್ಲಿ ಇಬ್ಬರಿಗೆ ಐಸೋಲೇಷನ್ ವ್ಯವಸ್ಥೆ ಮಾಡಲಾಗಿದೆ. 41 ಮಂದಿಗೆ 14 ದಿನ, 7 ಮಂದಿ 28 ದಿನದ ಹೋಮ್ ಐಸೋಲೇಷನ್ ಚಿಕಿತ್ಸೆ ಪೂರ್ಣಗೊಳಿಸಿದ್ದಾರೆ.