ಕರ್ನಾಟಕ

karnataka

ETV Bharat / city

ರೈತರ ಒತ್ತಾಯಕ್ಕೆ ಮಣಿದ ಜಿಲ್ಲಾಡಳಿತ: ಧಾರವಾಡ ರೈತರ ಧರಣಿ ಸತ್ಯಾಗ್ರಹ ಅಂತ್ಯ - 6ನೇ ದಿನಕ್ಕೆ ಮುಕ್ತಾಯವಾದ ಧಾರವಾಡ ರೈತರ ಧರಣಿ ಸತ್ಯಾಗ್ರಹ

ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರ ತೆರೆಯುವಂತೆ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಆರನೇ ದಿನಕ್ಕೆ ಕೊನೆಗೊಂಡಿದೆ. ಜಿಲ್ಲಾಡಳಿತ ಬೇಡಿಕೆಗಳಿಗೆ ಸ್ಪಂದಿಸಿರುವ ಹಿನ್ನೆಲೆ ಧರಣಿ ಕಬಿಟ್ಟಿರುವುದಾಗಿ ರೈತ ಸೇನಾ ರಾಜ್ಯಾಧ್ಯಕರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

Dharwad farmers protest close
ಧರಣಿ ಸತ್ಯಾಗ್ರಹ ವಾಪಸ್​ ಪಡೆದ ರೈತರು

By

Published : Feb 1, 2020, 3:23 PM IST

ಧಾರವಾಡ: ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಆರನೇ ದಿನಕ್ಕೆ ಕೊನೆಗೊಂಡಿದೆ.

ಧರಣಿ ಸತ್ಯಾಗ್ರಹ ವಾಪಸ್​ ಪಡೆದ ರೈತರು

ರೈತರೊಂದಿಗೆ ಜಿಲ್ಲಾಧಿಕಾರಿ ದೀಪಾ ಚೋಳನ್​ ಅವರು ಸಭೆ ನಡೆಸಿ, ರೈತರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಬಂದು ರೈತರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿ, ಧರಣಿ ಹಿಂಪಡೆಯುವಂತೆ ಮನವಿ ಮಾಡಿದರು. ಬಳಿಕ ರೈತರು ಧರಣಿ ವಾಪಸ್​ ಪಡೆದರು.

ನಂತರ ರೈತಸೇನಾ ರಾಜ್ಯಾಧ್ಯಕ್ಷ, ವೀರೇಶ್​ ಸೊಬರದಮಠ ಮಾತನಾಡಿ, ದೀಪಾ ಚೋಳನ್ ಇನ್ನು ಮೂರ್ನಾಲ್ಕು ದಿನಗಳಲ್ಲಿ ರೈತರ ಬೇಡಿಕೆಗಳನ್ನು ಸರ್ಕಾರದ ಜೊತೆ ಮಾತನಾಡಿ, ಈಡೇರಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ. ಹಾಗಾಗಿ ಧರಣಿಯನ್ನು ವಾಪಸ್​ ಪಡೆದಿದ್ದೇವೆ ಎಂದು ತಿಳಿಸಿದರು.

ABOUT THE AUTHOR

...view details