ಧಾರವಾಡ:73ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿಯೇ ನೆಹರೂ ಯುವಕೇಂದ್ರ ಹಾಗೂ ಫ್ರೆಂಡ್ಸ್ ಸೋಷಿಯಲ್ ಕ್ಲಬ್ ಆಯೋಜಿಸಿದ್ದ 'ವೃಕ್ಷ ಬಂಧನ' ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್ ಚಾಲನೆ ನೀಡಿದರು.
ಮರಕ್ಕೆ ರಾಖಿ ಕಟ್ಟಿದ ಧಾರವಾಡ ಡಿಸಿಯಿಂದ ವಿಶಿಷ್ಠ ಜಾಗೃತಿ - 'ವೃಕ್ಷ ಬಂಧನ' ಕಾರ್ಯಕ್ರಮ
ಸ್ವಾತಂತ್ರ್ಯ ದಿನದಂದೇ ಆಯೋಜಿಸಿದ್ದ 'ವೃಕ್ಷ ಬಂಧನ' ಕಾರ್ಯಕ್ರಮಕ್ಕೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಚಾಲನೆ ನೀಡಿ, ಮರಗಳಿಗೆ ರಾಖಿ ಕಟ್ಟುವ ಮೂಲಕ ಮರಗಳ ರಕ್ಷಣೆ ಮಾಡುವಂತೆ ಕರೆ ನೀಡಿದರು.
ಮರಕ್ಕೆ ರಾಖಿ ಕಟ್ಟಿದ ಧಾರವಾಡ ಡಿಸಿ
ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಮರಗಳಿಗೆ ರಾಖಿ ಕಟ್ಟುವ ಮೂಲಕ ಮರಗಳ ರಕ್ಷಣೆಗೆ ಮಾಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಎಸಿ ಮೊಹಮ್ಮದ್ ಝುಬೇರ ಸೇರಿದಂತೆ ಇತರ ಅಧಿಕಾರಿಗಳು, ಸಾರ್ವಜನಿಕರು ಮರಗಳಿಗೆ ರಾಖಿ ಕಟ್ಟಿದರು.