ಕರ್ನಾಟಕ

karnataka

ETV Bharat / city

ಕೊರೊನಾ ಕಾಲದಲ್ಲಿ ವಯೋವೃದ್ಧರ ಪಾಲಿಗೆ ಸಂಜೀವಿನಿಯಾದ ಚಿರಾಯು ವೈದ್ಯರ ತಂಡ - ಧಾರವಾಡ ಚಿರಾಯು ಆಸ್ಪತ್ರೆ ವೈದ್ಯರ ಸಮಾಜಿಕ ಸೇವೆ

ಲಾಕ್​ಡೌನ್​ ಹಿನ್ನೆಲೆ ಆಸ್ಪತ್ರೆಗೆ ಹೋಗಲಾರದೆ ರೋಗಿಗಳು, ವೃದ್ಧರು ಪರದಾಡುತ್ತಿದ್ದಾರೆ. ಈ ಹಿನ್ನೆಲೆ ನಗರದ ಯಾವ ಮೂಲೆಯಿಂದಾದರೂ ರೋಗಿಗಳು ಕರೆ ಮಾಡಿದ್ರೆ ಸ್ವಂತ ಖರ್ಚಿನಲ್ಲಿ ಅಲ್ಲಿ ಹೋಗುತ್ತಾರೆ. ಔಷಧ ಖರ್ಚು ಬಿಟ್ಟು ವೈದ್ಯರು ಯಾವುದೇ ಹಣ ಪಡೆಯುವದಿಲ್ಲ. ತೀರಾ ಬಡವರಿದ್ದರೆ ಕೆಲ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಔಷಧೋಪಚಾರವನ್ನು ಉಚಿತವಾಗಿ ನೀಡುತ್ತಾರೆ.

dharwad chirayu hospital doctors giving treatment in home
ಚಿರಾಯು ವೈದ್ಯರ ತಂಡ

By

Published : May 16, 2021, 3:56 PM IST

ಧಾರವಾಡ: ಕೊರೊನಾ ಅಲೆಯ ನಡುವೆ ಅನ್ಯ ಖಾಯಿಲೆಗಳಿಂದ ಬಳಲುತ್ತಿರುವ ವಯೋವೃದ್ಧರಿಗೆ ಮನೆ ಮನೆಗೆ ತೆರಳಿ ಚಿಕಿತ್ಸೆ ನೀಡುವ ಮೂಲಕ ಧಾರವಾಡದ ವೈದ್ಯರ ತಂಡವೊಂದು ಮಾನವೀಯತೆ ಮೆರೆದಿದೆ.

ನಗರದ ಮಾಳಮಡ್ಡಿಯಲ್ಲಿರುವ ಚಿರಾಯು ಆರೋಗ್ಯ ಜಾಗೃತಿ ಸಂಸ್ಥೆ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದೆ. ವಯೋವೃದ್ಧರು ಸೇರಿದಂತೆ ಹಲವು ರೋಗಿಗಳ ಮನೆ ಮನೆಗೆ ಹೋಗಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ರೋಗಿಗಳ ಪಾಲಿಗೆ ವೈದ್ಯರು ಸಂಜೀವಿನಿಯಾಗಿದ್ದಾರೆ.

ಕೊರೊನಾ ಕಾಲದಲ್ಲಿ ವಯೋವೃದ್ದರ ಪಾಲಿಗೆ ಸಂಜೀವಿನಿಯಾದ ಚಿರಾಯು ವೈದ್ಯರ ತಂಡ

ಲಾಕ್​ಡೌನ್​ ಹಿನ್ನೆಲೆ ಆಸ್ಪತ್ರೆಗೆ ಹೋಗಲಾರದೆ ರೋಗಿಗಳು, ವೃದ್ಧರು ಪರದಾಡುತ್ತಿದ್ದಾರೆ. ಈ ಹಿನ್ನೆಲೆ ನಗರದ ಯಾವ ಮೂಲೆಯಿಂದಾದರೂ ರೋಗಿಗಳು ಕರೆ ಮಾಡಿದ್ರೆ ಸ್ವಂತ ಖರ್ಚಿನಲ್ಲಿ ಅಲ್ಲಿ ಹೋಗುತ್ತಾರೆ. ಔಷಧ ಖರ್ಚು ಬಿಟ್ಟು ವೈದ್ಯರು ಯಾವುದೇ ಹಣ ಪಡೆಯುವದಿಲ್ಲ. ತೀರಾ ಬಡವರಿದ್ದರೆ ಕೆಲ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಔಷಧೋಪಚಾರವನ್ನು ಉಚಿತವಾಗಿ ನೀಡುತ್ತಾರೆ.

ಕಳೆದ ಲಾಕ್​ಡೌನ್​​ ಸಂದರ್ಭದಲ್ಲಿ ಈ ಸೇವಾ ಕಾರ್ಯ ಕೈಗೊಂಡಿದ್ದರು. ಈಗ ಪುನಃ ತಮ್ಮ ಕಾರ್ಯವನ್ನು ಮುಂದುವರೆಸಿದ್ದಾರೆ. ವೈದ್ಯರು ಮಾತ್ರವಲ್ಲದೆ ಲ್ಯಾಬ್ ಟೆಕ್ನಿಶಿಯನ್​ಗಳು ಸಹ ಕೈ ಜೋಡಿಸಿದ್ದಾರೆ. ಇದರ ಜೊತೆಗೆ ಹೋಮ್​​ ಐಸೋಲೇಷನ್​ನಲ್ಲಿರುವ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನೂ ಈ ತಂಡ ಮಾಡುತ್ತಿದೆ. ವೈದ್ಯ ತಂಡದ ನಿಸ್ವಾರ್ಥ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details