ಧಾರವಾಡ:ಶಿಕ್ಷಿಸದಂತೆ ದೇವರಿಗೆ ಕೈ ಮುಗಿದು ಕಳ್ಳನೋರ್ವ ಗಣೇಶ ಮೂರ್ತಿ ಕದ್ದು ಪರಾರಿಯಾಗಿರುವ ಘಟನೆ ಅಳ್ನಾವರ ತಾಲೂಕಿನ ಬೆಣಚಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಭಕ್ತಿಯಿಂದ ಕೈಮುಗಿದು 'ಬೆಳ್ಳಿಲೇಪಿತ' ಗಣೇಶ ಮೂರ್ತಿ ಕದ್ದ ಕಳ್ಳ: ದೃಶ್ಯ ಸಿಸಿಟಿವಿಯಲ್ಲಿ ಸೆರೆ - benachi ganesh idol theft
ತಡರಾತ್ರಿ ದೇವಸ್ಥಾನಕ್ಕೆ ಬಂದ ಕಳ್ಳ ತನ್ನ ಅಪರಾಧವನ್ನು ಕ್ಷಮಿಸುವಂತೆ ದೇವಿಗೆ ಕೈ ಮುಗಿದು ಗಣೇಶ ಮೂರ್ತಿ ಕದ್ದೊಯ್ದಿದ್ದಾನೆ.
ಗಣೇಶ ಮೂರ್ತಿ ಕದ್ದ ಕಳ್ಳ
ಬೆಣಚಿ ಗ್ರಾಮದ ಗ್ರಾಮದೇವಿ ಮಂದಿರದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ಕಳ್ಳತನ ಮಾಡಲಾಗಿದೆ. ತಡರಾತ್ರಿ ದೇವಸ್ಥಾನಕ್ಕೆ ಬಂದ ಕಳ್ಳ ಎರಡೂವರೆ ಕೆ.ಜಿ ತೂಕದ ಗಣೇಶ ಮೂರ್ತಿ ಕದ್ದುಕೊಂಡು ಹೋಗಿದ್ದಾನೆ.
ವಿಚಿತ್ರ ಅಂದ್ರೆ, ಶುದ್ಧ ಬೆಳ್ಳಿ ಅಂತ ವಿಗ್ರಹ ಕದ್ದ ಕಳ್ಳನಿಗೆ ಅದು ಬೆಳ್ಳಿಲೇಪಿತ ಮೂರ್ತಿ ಅಂತ ತಿಳಿದ್ರೆ ಶಾಕ್ ಆಗೋದಂತೂ ಖಂಡಿತ. ಅಳ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Last Updated : Jul 13, 2021, 8:57 PM IST