ಕರ್ನಾಟಕ

karnataka

ETV Bharat / city

ಬೆಲ್ಲದ್​ಗೆ ಸಚಿವ ಸ್ಥಾನ ಮಿಸ್ ಆಗಿದ್ದಕ್ಕೆ ನಾಳೆ ಧಾರವಾಡ ಬಂದ್:  ವೈರಲ್ ಸುದ್ದಿ ನಂಬಬೇಡಿ - dharwad news

ಶಾಸಕ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಆಗಸ್ಟ್​ 6 ರಂದು ಧಾರವಾಡ ಬಂದ್​ ಘೋಷಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದು ಫೇಕ್​ ನ್ಯೂಸ್​ ಯಾರೂ ನಂಬಬೇಡಿ ಎಂದು ಬೆಲ್ಲದ್​ ಆಪ್ತರು ತಿಳಿಸಿದ್ದಾರೆ.

dharwad band fake news viral
ಧಾರವಾಡ ಬಂದ್ ವೈರಲ್ ಸುದ್ದಿ

By

Published : Aug 5, 2021, 9:21 PM IST

ಹುಬ್ಬಳ್ಳಿ:ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಬುಧವಾರ ನಗರದಾದ್ಯಂತ ಪ್ರತಿಭಟನೆ ನಡೆಸಿದ್ದರು. ಇನ್ನೊಂದೆಡೆ ಆ.6 ರಂದು ಸಂಪೂರ್ಣ ಧಾರವಾಡ ಬಂದ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್ ಆಗುತ್ತಿದೆ. ಇದು ಸುಳ್ಳು ಯಾರು ಇದನ್ನ ನಂಬಬೇಡಿ.

ಅರವಿಂದ ಬೆಲ್ಲದ ಆಗಲಿ ಅವರು ಅಭಿಮಾನಿಗಳಾಗಲಿ ಯಾವುದೇ ಪ್ರತಿಭಟನೆ, ಬಂದ್​ಗೆ ಕರೆ ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣ ಧಾರವಾಡ ಬಂದ್ ಎಂಬ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ. ಇದು ಸುಳ್ಳು ಸುದ್ದಿಯಾಗಿದ್ದು, ನಾಳೆ ಯಾವುದೇ ಬಂದ್, ಪ್ರತಿಭಟನೆ ಇಲ್ಲ ಎಂದು ಅರವಿಂದ ಬೆಲ್ಲದ ಆಪ್ತರು ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details