ಧಾರವಾಡ:ಹಣ ವಾಪಸ್ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ತನ್ನ ಸಹೋದರಿಗೆ ರಸ್ತೆ ಬದಿಯಲ್ಲಿ ಸುತ್ತಿಗೆಯಿಂದ ಹೊಡೆದು ಹಲ್ಲೆ ನಡೆಸಿದ್ದಾನೆ. ಧಾರವಾಡದ ಮೆಹಬೂಬ್ ನಗರದ ದೊಡ್ಮನಿ ಮದುವೆ ಮಂಟಪದ ಎದುರು ಘಟನೆ ನಡೆಯಿತು. ಆಜಾದ್ ನಗರದ ಫಾತಿಮಾ ಎಂಬಾಕೆ ಇಕ್ಬಾಲ್ಗೆ 30 ಸಾವಿರ ರೂ ಹಣ ನೀಡಿದ್ದಳು. ಈ ಹಣವನ್ನು ಮರಳಿ ಕೊಡುವಂತೆ ಕೇಳಿದ್ದಕ್ಕೆ ಆತ ದಾಳಿ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಕೊಟ್ಟ ಹಣ ಮರಳಿ ಕೇಳಿದ್ದಕ್ಕೆ ಸಹೋದರಿಗೆ ಸುತ್ತಿಗೆಯಿಂದ ಹೊಡೆದ ಕಿಡಿಗೇಡಿ: ಸಿಸಿಟಿವಿ ದೃಶ್ಯ
ಫಾತಿಮಾ ಎಂಬ ಮಹಿಳೆ ತನ್ನ ಸಹೋದರನಿಗೆ 30 ಸಾವಿರ ರೂ ನೀಡಿದ್ದರು. ಈ ಹಣವನ್ನು ಮರಳಿ ಕೊಡುವಂತೆ ಕೇಳಿದ್ದಕ್ಕೆ ಆತ ಸುತ್ತಿಗೆಯಿಂದ ಹೊಡೆದು ಹತ್ಯೆಗೆ ಯತ್ನಿಸಿದ್ದಾನೆ.
ಹಣ ವಾಪಾಸ್ ಕೇಳಿದ್ದಕ್ಕೆ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ರಸ್ತೆ ಬದಿ ಇಬ್ಬರು ನಿಂತಿರುವ ಸಮಯದಲ್ಲಿ ಮಹಿಳೆಯ ತಲೆಗೆ ಇಕ್ಬಾಲ್ ಸುತ್ತಿಗೆಯಿಂದ ಬಲವಾಗಿ ನಾಲ್ಕು ಬಾರಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂದ ಫಾತಿಮಾ ತಕ್ಷಣ ಕುಸಿದು ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಟೆರೇಸ್ಗೆ ಕರೆದೊಯ್ದು 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಇಬ್ಬರು ಅಪ್ರಾಪ್ತರು