ಕರ್ನಾಟಕ

karnataka

ETV Bharat / city

ವಿವಿಧ ಬೇಡಿಕೆಗೆ ಆಗ್ರಹ, ಡಿಸಿ ಕಚೇರಿ ಎದುರು ಕೃಷಿ ಸಿಬ್ಬಂದಿ ಪ್ರತಿಭಟನೆ - ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಹಾಗೂ ಸಿಬ್ಬಂದಿ ನೇಮಕ

ಕೃಷಿ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ಸರಿದೂಗಿಸುವಂತೆ ಆಗ್ರಹಿಸಿ ಕೃಷಿ ಇಲಾಖೆ ಸಿಬ್ಬಂದಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

KN_DWD_2_agri_worker_protest_av_KA10001
ವಿವಿಧ ಬೇಡಿಕೆಗೆ ಆಗ್ರಹ, ಡಿಸಿ ಕಛೇರಿ ಎದುರು ಕೃಷಿ ಸಿಬ್ಬಂದಿಗಳ ಪ್ರತಿಭಟನೆ

By

Published : Feb 15, 2020, 1:30 PM IST

ಧಾರವಾಡ:ಕೃಷಿ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ಸರಿದೂಗಿಸುವಂತೆ ಆಗ್ರಹಿಸಿ ಕೃಷಿ ಇಲಾಖೆ ಸಿಬ್ಬಂದಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವಿವಿಧ ಬೇಡಿಕೆಗೆ ಆಗ್ರಹ, ಡಿಸಿ ಕಛೇರಿ ಎದುರು ಕೃಷಿ ಸಿಬ್ಬಂದಿಗಳ ಪ್ರತಿಭಟನೆ
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕೃಷಿ ಇಲಾಖೆ ಸಿಬ್ಬಂದಿ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಮೂಲಕ ಸರ್ಕಾರದ ಕೃಷಿ ಇಲಾಖೆ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿದರು. ಸಿಬ್ಬಂದಿ ಕೊರತೆಯಿಂದ ಕೆಲಸದ ಜತೆಗೆ ಇತರ ಕೆಲಸಗಳಿಂದ ಒತ್ತಡ ಹೆಚ್ಚಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವಂತಾಗಿದೆ. ಹೊಸದಾಗಿ ರಚನೆಯಾದ 50 ತಾಲೂಕುಗಳಿಗೆ ಕೂಡಲೇ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಹಾಗೂ ಸಿಬ್ಬಂದಿ ನೇಮಕ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಮನವಿ ಸ್ವೀಕರಿಸಿ ಕೂಲಂಕುಷವಾಗಿ ಪರಿಗಣಿಸಿ ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲಿದ್ರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ABOUT THE AUTHOR

...view details