ಕರ್ನಾಟಕ

karnataka

ETV Bharat / city

ಹೈನೋದ್ಯಮಕ್ಕೂ ತಟ್ಟಿದ ಪ್ರವಾಹ ಬಿಸಿ : ಹಾಲು ಉತ್ಪಾದನೆಯಲ್ಲಿ ಇಳಿಕೆ - Hyper industry

ನೆರೆ ಹಾವಳಿಯಿಂದಾಗಿ ಧಾರವಾಡ ಹಾಲು ಒಕ್ಕೂಟದಲ್ಲಿ ಹಾಲು ಉತ್ಪಾದನಾ ಪ್ರಮಾಣದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಪ್ರವಾಹದಿಂದಾಗಿ ಸುಮಾರು 7,000 ರೈತರು ಹಾಲು ಉತ್ಪಾದನೆ ಕೈ ಬಿಟ್ಟಿದ್ದಾರೆ.

ಹಾಲು ಉತ್ಪಾದನೆಯಲ್ಲಿ ಇಳಿಕೆ

By

Published : Aug 22, 2019, 9:13 AM IST

Updated : Aug 22, 2019, 7:51 PM IST

ಹಾವೇರಿ : ನೆರೆ ಪ್ರವಾಹದ ಕರಾಳ ಛಾಯೆ ಹೈನೋದ್ಯಮದ ಮೇಲೂ ಬಿದ್ದಿದ್ದು, ಕಳೆದ ನಾಲ್ಕು ದಶಕಗಳಲ್ಲಿ ಧಾರವಾಡ ಹಾಲು ಒಕ್ಕೂಟದಲ್ಲಿ ಇದೇ ಪ್ರಥಮ ಬಾರಿಗೆ ಹಾಲು ಉತ್ಪಾದನೆ ಪ್ರಮಾಣ ತೀವ್ರ ಇಳಿಕೆ ಕಂಡಿದೆ.

ರಾಜ್ಯದ ಪ್ರಮುಖ ಹಾಲು ಉತ್ಪಾದಕ ಘಟಕಗಳಲ್ಲಿ ಒಂದಾದ ಧಾರವಾಡ ಹಾಲು ಉತ್ಪಾದಕ ಒಕ್ಕೂಟದಲ್ಲಿ, ಕಳೆದ ಕೆಲ ದಿನಗಳ ಹಿಂದೆ ಕಾಣಿಸಿಕೊಂಡ ನೆರೆ ಹಾವಳಿ ಈ ಒಕ್ಕೂಟದ ಹಾಲು ಉತ್ಪಾದನೆ ಮೇಲೆ ತೀವ್ರ ಪರಿಣಾಮ ಬೀರಿದೆ. ವರುಣನ ಆರ್ಭಟ ಮತ್ತು ಕೃಷ್ಣಾ ನದಿಯ ಪ್ರವಾಹದಿಂದಾಗಿ ಹಾಲು ಉತ್ಪಾದಕ ಸಹಕಾರ ಸಂಘಗಳು ತತ್ತರಿಸಿವೆ.

ಹಾಲು ಉತ್ಪಾದನೆಯಲ್ಲಿ ಇಳಿಕೆ

ಪರೀಕ್ಷಾ ಉಪಕರಣಗಳು ಸೇರಿದಂತೆ ಕ್ಯಾನ್‌ಗಳು ಮತ್ತು ಪಶುಗಳ ಆಹಾರ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ನಿತ್ಯ ಧಾರವಾಡ ಹಾಲು ಒಕ್ಕೂಟಕ್ಕೆ ನಲವತ್ತು ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಆದರೆ, ಪ್ರವಾಹ ಹಿನ್ನೆಲೆ ಉತ್ಪಾದನಾ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಸುಮಾರು 200 ಸಂಘಗಳಲ್ಲಿ ಹಾಲಿನ ಶೇಕರಣೆ ಬಂದ್ ಆಗುವ ಮಟ್ಟಿಗೆ ಪ್ರವಾಹ ಪ್ರಭಾವ ಬೀರಿದೆ ಎನ್ನುತ್ತಾರೆ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ್ ಅರಬಗೊಂಡ.

ನೆರೆ ಹಾವಳಿಯಿಂದ ಜಿಲ್ಲೆಯ ಹಲವು ಹಾಲು ಶೇಕರಣಾ ಸಂಘಗಳು ಕಟ್ಟಡಗಳನ್ನು ಕಳೆದುಕೊಂಡಿವೆ. ಸುಮಾರು 7,000 ರೈತರು ಹಾಲು ಉತ್ಪಾದನೆಯನ್ನ ಕೈಬಿಟ್ಟಿದ್ದಾರೆ. ಅವರ ನೆರವಿಗೆ ಧಾರವಾಡ ಹಾಲು ಒಕ್ಕೂಟ ಮುಂದಾಗಿದೆ. ಸಂತ್ರಸ್ತ ಗ್ರಾಮಗಳಿಗೆ ಭೇಟಿ ನೀಡಿ ಉಚಿತವಾಗಿ ಮೇವು ನೀಡುವ ವ್ಯವಸ್ಥೆ, ಜಾನುವಾರುಗಳಿಗೆ ವೈದ್ಯಕೀಯ ಚಿಕಿತ್ಸೆಯನ್ನ ಈಗಾಗಲೇ ಒಕ್ಕೂಟ ಕೈಗೊಂಡಿದೆ. ಅಲ್ಲದೆ ಹಾಲು ಶೇಖರಣಾ ಘಟಕಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಒಕ್ಕೂಟ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಈ ಪರಿಸ್ಥಿತಿಯಲ್ಲಿ ಸಹ ಧಾರವಾಡ ಹಾಲು ಒಕ್ಕೂಟ ತನ್ನ ಒಂದು ದಿನ ಶೇಖರಣೆಯಾಗುವ ಹಾಲನ್ನು ಮತ್ತು ಸಿಬ್ಬಂದಿಯ ಒಂದು ದಿನ ವೇತನವನ್ನ ನೆರೆ ಸಂತ್ರಸ್ತರಿಗೆ ನೀಡಲು ಮುಂದಾಗಿದೆ.

Last Updated : Aug 22, 2019, 7:51 PM IST

ABOUT THE AUTHOR

...view details