ಧಾರವಾಡ: ಕೊರೊನಾ ಲಸಿಕೆ ಡ್ರೈ ರನ್ ಧಾರವಾಡದಲ್ಲಿ ಆರಂಭಗೊಂಡಿದ್ದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಚಾಲನೆ ನೀಡಿದರು.
ಡ್ರೈರನ್ ಲಸಿಕೆ ಕೇಂದ್ರಕ್ಕೆ ಡಿಸಿ ಚಾಲನೆ: ಮೊದಲ ಹಂತದಲ್ಲಿ 22 ಸಾವಿರ ಹೆಸರು ನೋಂದಣಿ - DC Nitesha Patil inaugurate Dryron Vaccine Center
ಧಾರವಾಡ ಜಿಲ್ಲೆಯ ಎಂಟು ಕಡೆಗಳಲ್ಲಿ ಈಗಾಗಲೇ ಡ್ರೈ ರನ್ ಆರಂಭಗೊಂಡಿದ್ದು, ಈ ಕುರಿತು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಮಾಹಿತಿ ನೀಡಿದ್ದಾರೆ.
ಡ್ರೈರನ್ ಕುರಿತು ಮಾಹಿತಿ ನೀಡಿದ ನಿತೇಶ ಪಾಟೀಲ್
ಜಿಲ್ಲೆಯ ಎಂಟು ಕಡೆಗಳಲ್ಲಿ ಡ್ರೈ ರನ್ ಆರಂಭಗೊಂಡಿದೆ. ಜಿಲ್ಲಾಸ್ಪತ್ರೆ, ಪುರೋಹಿತ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಹುಬ್ಬಳ್ಳಿ ಕಿಮ್ಸ್, ಸಂಜೀವಿನಿ ಆಯುರ್ವೇದ ವೈದ್ಯಕೀಯ ಕಾಲೇಜು ಸೇರಿದಂತೆ ಹಲವು ಕಡೆಗಳಲ್ಲಿ ಡ್ರೈ ರನ್ ಪ್ರಾರಂಭಗೊಂಡಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಿತೇಶ ಪಾಟೀಲ್, ಮೊದಲ ಹಂತದಲ್ಲಿ 22 ಸಾವಿರ ಹೆಸರು ನೋಂದಣಿಯಾಗಿದೆ. ಈಗಾಗಲೇ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ವಿತರಣೆ ಡ್ರೈರನ್ ನಡೆಯುತ್ತಿದೆ. ಎರಡನೇ ಹಂತದಲ್ಲಿ ಕೊರೊನಾ ವಾರಿಯರ್ಸ್ಗಳಿಗೆ ಲಸಿಕೆ ವಿತರಣೆ ಮಾಡಲಾಗುತ್ತದೆ. ಮೂರನೇ ಹಂತದಲ್ಲಿ ವಯಸ್ಸಾದವರಿಗೆ ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.