ಧಾರವಾಡ :ಕಣ್ಣಿಗೆ ಕಾರದ ಪುಡಿ ಎರಚಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಬಂಧಿಸುವಲ್ಲಿ ಅಣ್ಣಿಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಹೊರ ಹೊಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಹುಬ್ಬಳ್ಳಿಯ ಸ್ವೀಟ್ ಮಾರ್ಟ್ ಕಂಪನಿಯ ಕಾರನ್ನು ತಡೆದು ನಾಲ್ವರು ದರೋಡೆ ಮಾಡಿದ್ದಾರೆ. ಕಣ್ಣಿಗೆ ಕಾರದ ಪುಡಿ ಎರಚಿ ಅವರ ₹1.22 ಲಕ್ಷ ಹಣವನ್ನು ಖದೀಮರು ದೋಚಿರುವ ಆರೋಪ ಕೇಳಿ ಬಂದಿದೆ.
ಕಣ್ಣಿಗೆ ಕಾರದ ಪುಡಿ ಎರಚಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಅಂದರ್ - ಧಾರವಾಡದಲ್ಲಿ ದರೋಡೆಕೋರರ ಬಂಧನ
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಹೊರಹೊಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರದ ಪುಡಿ ಎರಚಿ ಹಣ ದೋಚುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ..
ಕಣ್ಣಿಗೆ ಕಾರದ ಪುಡಿ ಎರಚಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಅಂದರ್
ಕುಂದಗೋಳ ತಾಲೂಕಿನ ಮಂಜುನಾಥ್ ಡೊಳ್ಳಿನ, ಚಾಕಲಬ್ಬಿಯ ಯಲ್ಲಪ್ಪ ಗೋಗಿ, ಲಕ್ಷ್ಮೇಶ್ವರದ ಮಲ್ಲೇಶ್ ಹೊನಕೆರಪ್ಪ ನವಲಗುಂದದ ಈರಪ್ಪ ಬಾಳೋಜಿ ಬಂಧಿತ ಆರೋಪಿಗಳಾಗಿದ್ದಾರೆ. ಘಟನೆ ನಡೆದ ಎರಡೇ ದಿನದಲ್ಲಿ ಆರೋಪಿಗಳು ಅಂದರ್ ಆಗಿದ್ದಾರೆ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಭೀಕರ ರಸ್ತೆ ಅಪಘಾತದಲ್ಲಿ ಸಿಆರ್ಪಿಎಫ್ ಸಬ್ ಇನ್ಸ್ಪೆಕ್ಟರ್ ಹಾಗೂ ವಿದೇಶಿ ವಿದ್ಯಾರ್ಥಿ ಸಾವು