ಹುಬ್ಬಳ್ಳಿ: ಮನೆಯಲ್ಲಿಯೇ ತ್ಯಾಜ್ಯವನ್ನು ವಿಂಗಡಿಸಿ ವೈಜ್ಞಾನಿಕವಾಗಿ ಸಾವಯವ ಗೊಬ್ಬರ ತಯಾರಿಸಿ ಮಾದರಿಯಾದ ತಾಲೂಕಿನ ಅಕ್ಷಯ ಕಾಲೋನಿಯ ಮನೆಯೊಂದಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್ ಭೇಟಿ ನೀಡಿ ಆ ಕುಟುಂಬವನ್ನು ಸನ್ಮಾನಿಸಿದರು.
ಹುಬ್ಬಳ್ಳಿಯ ಅಕ್ಷಯ ಕಾಲೋನಿ ನಿವಾಸಿಯಾದ ಕೆ.ಶಂಕರ್ ಅವರ ಮನೆಯಲ್ಲಿ, ತ್ಯಾಜ್ಯವನ್ನು ಹಸಿ ಹಾಗೂ ಒಣ ಕಸವನ್ನಾಗಿ ಮೂಲದಲ್ಲಿಯೇ ವಿಂಗಡಿಸಿ ವೈಜ್ಞಾನಿಕವಾಗಿ ಸಾವಯವ ಗೊಬ್ಬರ ತಯಾರಿಸಿ, ತಮ್ಮ ಮನೆಯ ತೋಟಕ್ಕೆ ಬಳಸುತ್ತಿದ್ದಾರೆ. ಇವರ ಮನೆಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಭೇಟಿ ನೀಡಿ, ಕೆ. ಶಂಕರ್ ಮತ್ತು ರೇಖಾ ದಂಪತಿಗಳ ಪರಿಸರ ಕಾಳಜಿ ಗುರುತಿಸಿ " ಪರಿಸರ ಸ್ನೇಹಿ ಕುಟುಂಬ" ಎಂಬ ನಾಮಫಲಕ ಹಾಗೂ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿದರು.