ಧಾರವಾಡ: ಜಿಲ್ಲೆಯ ಗೌಡಗೇರಿ ಗ್ರಾಮ ಪಂಚಾಯತ್ ಹೆಸರಿನಲ್ಲಿ ಸಾಫ್ಟ್ವೇರ್ವೊಂದನ್ನು ಬಳಸಿ ಅಕ್ರಮವಾಗಿ ಜಿಲ್ಲಾಡಳಿತದ ನರೇಗಾ ಖಾತೆಯ ಹಣವನ್ನು ಪಡೆದುಕೊಂಡು ಮೋಸ ಮಾಡಿದ ಆರೋಪಿಯನ್ನು ಸೈಬರ್ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನರೇಗಾ ಖಾತೆ ಹಣ ಲೂಟಿ... ಪೊಲೀಸರಿಂದ ಆರೋಪಿ ಸೆರೆ
ಜಿಲ್ಲೆಯ ಗೌಡಗೇರಿ ಗ್ರಾಮ ಪಂಚಾಯಿತಿಯ ಹೆಸರಿನಲ್ಲಿ ಸಾಫ್ಟ್ವೇರ್ವೊಂದನ್ನು ಬಳಸಿ ಅಕ್ರಮವಾಗಿ ಜಿಲ್ಲಾಡಳಿತದ ನರೇಗಾ ಖಾತೆಯ ಹಣವನ್ನು ಪಡೆದುಕೊಂಡು ಮೋಸ ಮಾಡಿದ ಆರೋಪಿಯನ್ನು ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಕ್ರಮವಾಗಿ ನರೇಗಾ ಖಾತೆ ಹಣ ಲೂಟಿ, ಸೈಬರ್ ಪೊಲೀಸರಿಂದ ಆರೋಪಿ ಸೆರೆ
ಚಿತ್ರದುರ್ಗ ಜಿಲ್ಲೆಯ ಗ್ರಾಮವೊಂದರ ನಿವಾಸಿಯಾದ ಚಂದ್ರಶೇಖರಪ್ಪ ಬಂಧಿತ ಆರೋಪಿ. ಈತನ ವಿರುದ್ಧ ಕಲಂ.66 (ಡಿ) ಐ.ಟಿ ಆ್ಯಕ್ಟ್ ಮತ್ತು 420 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಡೇಟಾ ಎಂಟ್ರಿ ಆಪರೇಟರ್ ಆಗಿರುವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಲ್ಯಾಪ್‍ಟಾಪ್, ಡೊಂಗಲ್ ಮತ್ತು 21,750 ರೂ. ಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಪ್ರಕರಣದ ತನಿಖೆಯನ್ನು ಜಯಂತ ಗೌಳಿ ಕೈಗೊಂಡಿದ್ದು, ಇವರ ಕಾರ್ಯವನ್ನು ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.
Last Updated : Feb 26, 2020, 8:31 PM IST