ಹುಬ್ಬಳ್ಳಿ : ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಮೇಲ್ನೋಟಕ್ಕೆ ಗೊತ್ತಾದ ಮೇಲೆ ಸರ್ಕಾರ ತನಿಖೆಗೆ ಆದೇಶಿಸಿದೆ. ಅಕ್ರಮ ನಡೆದಿದೆ ಎಂದು ಗೊತ್ತಾದ ಮೇಲೂ ತನಿಖೆ ನಡೆಸದೆೇ ಹಾಗೆಯೇ ನೇಮಕ ಮಾಡಿಕೊಂಡರೆ ತಪ್ಪಿತಸ್ಥರು ಯಾರು, ಪ್ರಾಮಾಣಿಕರು ಯಾರು ಅಂತ ಹೇಗೆ ಗೊತ್ತಾಗುತ್ತದೆ?. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿದೆ ಎಂದು ಸಿ.ಟಿ.ರವಿ ಪ್ರತಿಕ್ರಿಯಿಸಿದರು.
ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಭಯಪಡುವ ಅಗತ್ಯವಿಲ್ಲ: ಸಿ.ಟಿ.ರವಿ - PSI recruitment scam govt decides to do re exam
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಸರಕಾರ ಮರುಪರೀಕ್ಷೆ ನಡೆಸಲು ನಿರ್ಧರಿಸಿರುವುದು ಸ್ವಾಗತಾರ್ಹ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
PSI ಅಕ್ರಮ ಪ್ರಕರಣ: ಪ್ರಾಮಾಣಿಕರು ಉತ್ತೀರ್ಣರಾಗ್ತಾರೆ, ನಕಲು ಮಾಡಿದವರು ಬಾಯಿ ಬಡೆದುಕೊಳ್ಳುತ್ತಾರೆ: ಸಿ.ಟಿ.ರವಿ
ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಭಯಪಡುವ ಅಗತ್ಯವಿಲ್ಲ. ನಕಲು ಮಾಡಿದವರು ಮಾತ್ರ ಬಾಯಿ ಬಡಿದುಕೊಳ್ಳುವರು. ತನಿಖೆ ಪೂರ್ಣಗೊಂಡು ಮತ್ತೆ ನೇಮಕ ಆಗುವಷ್ಟರಲ್ಲಿ ಅವರೆಲ್ಲರೂ ನಿವೃತ್ತಿಯ ಹಂತಕ್ಕೆ ಬಂದಿರುತ್ತಾರೆ. ಈ ನಿಟ್ಟಿನಲ್ಲಿ ಮರುಪರೀಕ್ಷೆ ನಡೆಸಲು ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಸಿ.ಟಿ.ರವಿ ಸ್ಪಷ್ಟನೆ ಕೊಟ್ಟರು.
ಇದನ್ನೂ ಓದಿ :ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಜೆ.ಪುಟ್ಟಸ್ವಾಮಿ ರಾಜೀನಾಮೆ