ಹುಬ್ಬಳ್ಳಿ:ಧಾರಾಕಾರ ಮಳೆಯಿಂದ ಹಾನಿಗೀಡಾದ ಹುಬ್ಬಳ್ಳಿ, ಅಣ್ಣಿಗೇರಿ, ನವಲಗುಂದ ತಾಲೂಕಿನ ಹಲವು ಹಳ್ಳಿಗಳಿಗೆ ಭೇಟಿ ನೀಡಿ, ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲು ಬಂದಿದ್ದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ರಾಜ್ಯ ಸರ್ಕಾರದ ಆಡಳಿತ ವೈಖರಿ ಕುರಿತು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ರಾಜ್ಯಭಾರ ಆಳ್ವಿಕೆ ನಡೆಯುತ್ತಿದೆ.. ಮಾಜಿ ಸಚಿವ ಬಸವರಾಜ ಹೊರಟ್ಟಿ - State Government of Karnataka
ರಾಜ್ಯದಲ್ಲಿ ರಾಜ್ಯಭಾರದ ಆಳ್ವಿಕೆ ನಡೆಯುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ದೊರೆಯಾಗಿದ್ದಾರೆ. ಅವರ ಆಳ್ವಿಕೆ ಎಲ್ಲಿಯವರೆಗೆ ನಡೆಯುತ್ತೆ ನೋಡೋಣ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ವ್ಯಂಗ್ಯವಾಡಿದರು.
ರಾಜ್ಯದಲ್ಲಿ ರಾಜ್ಯಭಾರದ ಆಳ್ವಿಕೆ ನಡೆಯುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ದೊರೆಯಾಗಿದ್ದಾರೆ. ಅವರ ಆಳ್ವಿಕೆ ಎಲ್ಲಿಯವರೆಗೆ ನಡೆಯುತ್ತೆ ನೋಡೋಣ. ಇದನ್ನ ಅರಿತು ಕೇಂದ್ರ ಸರ್ಕಾರ ಅಲ್ಲಿಂದಲೇ ರಾಜ ಭವನದಲ್ಲಿ ಕುಳಿದು 3-4 ಜನರನ್ನು ಆದರೂ ಮಂತ್ರಿ ಮಾಡಬೇಕೆಂದು ನಾ ಈ ಹಿಂದೆ ಹೇಳಿದ್ದೇನೆ. ಆದರೂ ಅವರ ಕೈಯಲ್ಲಿ ಅದು ಆಗದು ಎಂದು ವ್ಯಂಗ್ಯವಾಡಿದರು.
ರಾಜ್ಯದ ಬಿಜೆಪಿ ಸರ್ಕಾರಕ್ಕೆ ಮಂತ್ರಿಮಂಡಲದ ವಿಸ್ತರಣೆಯ ಚಿಂತೆ ಇಲ್ಲ. ಅವರಿಗೆ ಇರುವುದು ಕೇವಲ 18 ಅತೃಪ್ತರ ಚಿಂತೆ. ಹಾಗಾಗಿ ಉಳಿದವರ ಬಗ್ಗೆ ಚಿಂತಿಸುವುದಿಲ್ಲ. ಇನ್ನು ರಾಜ್ಯದಲ್ಲಿ ಜನರ ಸಂಕಷ್ಟಗಳಿಗೆ ಧ್ವನಿಯಾಗಬೇಕಿದ್ದ ಸಚಿವರೇ ಇಲ್ಲದ ಕಾರಣ ಅಧಿಕಾರಿಗಳು ಅವರವರ ಕಾರ್ಯ ಮಾಡುತ್ತಾರೆ. ಆದರೆ, ಮೇಲ್ವಿಚಾರಣೆ ಇಲ್ಲದ ಕಾರಣ ಸಮಸ್ಯೆಗಳಾಗುತ್ತವೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನವನ್ನು ಹಂಚಿಕೆ ಮಾಡಿ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕೆಂದರು.