ಹುಬ್ಬಳ್ಳಿ:ಲಾಕ್ಡೌನ್ ಸಂದರ್ಭದಲ್ಲಿ ಸಂಪೂರ್ಣವಾಗಿ ಸ್ಥಗಿತಗೊಂಡ ಕೋರ್ಟ್ ಕಲಾಪಗಳು ಸರ್ಕಾರದ ಸೂಕ್ತ ನಿರ್ದೇಶನದ ಅನ್ಲಾಕ್ ಬಳಿಕ ಪುನರಾರಂಭಗೊಂಡಿದ್ದು, ಸ್ಟ್ಯಾಂಡರ್ಡ್ ಆಪರೇಷನ್ ಪ್ರೊಸೀಡಿಂಗ್ ಆದೇಶದ ಅನ್ವಯ ಪ್ರಾರಂಭಗೊಂಡಿದೆ.
ಪುನರಾರಂಭಗೊಂಡ ಕೋರ್ಟ್ ಕಲಾಪ: ಆ್ಯಂಟಿಜನ್ ತಪಾಸಣೆ ಬಳಿಕವಷ್ಟೇ ಪ್ರವೇಶ - ಹುಬ್ಬಳ್ಳಿ ಕೋರ್ಟ್
ಸಂಪೂರ್ಣವಾಗಿ ಸ್ಥಗಿತಗೊಂಡ ಕೋರ್ಟ್ ಕಲಾಪಗಳು ಸರ್ಕಾರದ ಸೂಕ್ತ ನಿರ್ದೇಶನದ ಅನ್ಲಾಕ್ ಬಳಿಕ ಪುನರಾರಂಭಗೊಂಡಿದೆ. ಕೋರ್ಟ್ ಆವರಣದಲ್ಲಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ವ್ಯವಸ್ಥೆ ಕಲ್ಪಿಸಲಾಗಿದ್ದು, ತಪಾಸಣೆ ನಂತರವೇ ಕೋರ್ಟ್ಗೆ ಪ್ರವೇಶ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.
court
ಕೊರೊನಾ ಲಾಕ್ಡೌನ್ ಬಳಿಕ ಕಕ್ಷಿದಾರರು, ಸಾಕ್ಷಿದಾರರು ಇಲ್ಲದೇ ನಡೆಯುತ್ತಿದ್ದ ಕಲಾಪ ಪ್ರಾರಂಭಗೊಂಡಿದ್ದು, ಕೋರ್ಟ್ ಆವರಣದಲ್ಲಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ. ತಪಾಸಣೆ ನಂತರವೇ ಕೋರ್ಟ್ಗೆ ಪ್ರವೇಶ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.
ಕೋರ್ಟ್ ಆವರಣದಲ್ಲಿ ನ್ಯಾಯಾಧೀಶರು, ವಕೀಲರು ಹಾಗೂ ಸಿಬ್ಬಂದಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ನೋಟರಿ ಕಾರ್ಯಗಳನ್ನು ಕಾಂಪೌಂಡ್ ಹೊರಗಡೆ ನಡೆಸಲು ಆದೇಶಿಸಲಾಗಿದೆ.
Last Updated : Oct 14, 2020, 8:34 PM IST