ಹುಬ್ಬಳ್ಳಿ:ಕೊರೊನಾ ವೈರಸ್ ಭೀತಿಯಿಂದ ಲಾಕ್ಡೌನ್ ಘೋಷಣೆಯಾಗಿದ್ದು,ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ, ಪೊಲೀಸ್ ಸಿಬ್ಬಂದಿಗೆ ಪತಿ ನಾಗರಾಜ ಗೌರಿ ಮತ್ತು ಪತ್ನಿ ದೀಪಾ ದಿನಸಿ ಕಿಟ್ ವಿತರಣೆ ಮಾಡಿ,ಅಭಿನಂದಿಸಿದರು.
ಕಾರ್ಮಿಕ ದಿನ : ನೌಗರಾಜ ಗೌರಿ ದಂಪತಿಯಿಂದ ಕೊರೊನಾ ವಾರಿಯರ್ಸ್‌ಗೆ ದಿನಸಿ ಕಿಟ್ ವಿತರಣೆ.. - ಹುಬ್ಬಳ್ಳಿ ದಿನಸಿ ಕಿಟ್ ವಿತರಣೆ ಸುದ್ದಿ
ಕಳೆದೊಂದು ತಿಂಗಳಿನಿಂದ ನಾಗರೌಜ ಗೌರಿ ದಂಪತಿ ನಿತ್ಯ ಹಸಿದವರ ಹೊಟ್ಟೆ ತುಂಬಿಸುತ್ತಿದೆ. ದೀಪಾ ಗೌರಿ ಮಹಾನಗರ ಪಾಲಿಕೆ ಸದಸ್ಯೆ ಕೂಡ ಆಗಿದ್ದಾರೆ. ಈ ದಂಪತಿಯ ಈ ಸಮಾಜ ಕಾರ್ಯವನ್ನ ಸಾಕಷ್ಟು ಜನ ಶ್ಲಾಘಿಸಿದ್ದಾರೆ.

ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಪೌರಕಾರ್ಮಿಕರ ಶ್ರಮ ನಿಜಕ್ಕೂ ಶ್ಲಾಘನೀಯ. ಇಂತಹ ಸಮಯದಲ್ಲಿಯೂ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ.
ಲಾಕ್ಡೌನ್ ಸಂದರ್ಭದಲ್ಲಿ ಹು-ಧಾ ಮಹಾನಗರದ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರಕಾರ್ಮಿಕರಿಗೂ ಅಭಿನಂದನೆ ಸಲ್ಲಿಸುವ ಸದುದ್ದೇಶದಿಂದ ಈ ಕಾರ್ಯವನ್ನು ಕೈಗೊಳ್ಳಲಾಗಿತ್ತು ಎಂದಿದ್ದಾರೆ. ಕಳೆದೊಂದು ತಿಂಗಳಿನಿಂದ ನಾಗರೌಜ ಗೌರಿ ದಂಪತಿ ನಿತ್ಯ ಹಸಿದವರ ಹೊಟ್ಟೆ ತುಂಬಿಸುತ್ತಿದೆ. ದೀಪಾ ಗೌರಿ ಮಹಾನಗರ ಪಾಲಿಕೆ ಸದಸ್ಯೆ ಕೂಡ ಆಗಿದ್ದಾರೆ. ಈ ದಂಪತಿಯ ಈ ಸಮಾಜ ಕಾರ್ಯವನ್ನ ಸಾಕಷ್ಟು ಜನ ಶ್ಲಾಘಿಸಿದ್ದಾರೆ.