ಕರ್ನಾಟಕ

karnataka

ETV Bharat / city

ಮಳೆಯಿಂದ 8 ಎಕರೆಯಲ್ಲಿನ ಬೆಳೆ ಸಂಪೂರ್ಣ ನಾಶ: ಕೇಳೋರಿಲ್ಲ ರೈತನ ಗೋಳು - Cotton plant destroyed by rain

ಧಾರವಾಡ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ನವಲಗುಂದ ತಾಲೂಕಿನ ಬ್ಯಾಲ್ಯಾಳ ತುಪ್ಪರಿಹಳ್ಳ ಸಂಪೂರ್ಣ ತುಂಬಿದೆ. ಹೀಗಾಗಿ ಹೆಸರು, ಹತ್ತಿ, ಹುರುಳಿ, ಈರುಳ್ಳಿ ಬೆಳೆಗಳು ಸಂಪೂರ್ಣ ನೀರು ಪಾಲಾಗಿವೆ.

ಮಳೆಯಿಂದ ಹತ್ತಿ ಹೊಲ ಹಾಳು

By

Published : Aug 7, 2019, 5:36 PM IST

ಧಾರವಾಡ: ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಬೆಳೆಗಳು ನೀರು ಪಾಲಾಗಿವೆ.

ನವಲಗುಂದ ತಾಲೂಕಿನ ಬ್ಯಾಲ್ಯಾಳ ತುಪ್ಪರಿಹಳ್ಳ ಸಂಪೂರ್ಣ ತುಂಬಿದ್ದು, ಹೆಸರು, ಹತ್ತಿ, ಹುರುಳಿ, ಈರುಳ್ಳಿ ಬೆಳೆಗಳು ಸಂಪೂರ್ಣ ನೀರು ಪಾಲಾಗಿವೆ. ಹೊಲವನ್ನು ನಂಬಿ ಬದುಕುತ್ತಿದ್ದ ರೈತನ ಪಾಡು ಈಗ ಹೇಳತಿರದಾಗಿದೆ. ಸುಮಾರು ಎಂಟು ಎಕರೆ ಹೊಲ ನೀರು ಪಾಲಾಗಿರುವುದು ರೈತರನ್ನು ಕಂಗಾಲಾಗಿಸಿದೆ.

ಮಳೆಯಿಂದ ಹತ್ತಿ ಹೊಲ ಹಾಳು

ಮಳೆಗಾಗಿ ಪೂಜೆ ಮಾಡುವ ರೈತ ಈಗ ಅದೇ ಮಳೆಗೆ ಶಾಪ ಹಾಕುತ್ತಿದ್ದಾನೆ. ಈ ಪರಿ ಸತತ ಮಳೆ ಸುರಿದು ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡರು, ಯಾವೊಬ್ಬ ಅಧಿಕಾರಿಯೂ ಸಹ ಸ್ಥಳಕ್ಕೆ ಬಂದು ಪರಿಶೀಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಬರೀ ವೋಟ್ ಕೇಳೋಕೆ ಬಂದರೆ ಸಾಲದು, ಸ್ವಾಮಿ ಇವಾಗ ಬನ್ನಿ, ನಮ್ಮ ಕಷ್ಟ ಪರಿಹರಿಸಿ ಎಂದು ರೈತರು ಒತ್ತಾಯಿಸಿದ್ದಾರೆ.

ABOUT THE AUTHOR

...view details