ಹುಬ್ಬಳ್ಳಿ:ಕೊರೊನಾ ವೈರಸ್ ಭೀತಿ ಹಿನ್ನೆಲೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ನಗರದ ಹಲವು ಬಡಾವಣೆ ರಸ್ತೆ, ಕಾಂಪ್ಲೆಕ್ಸ್ಗಳಿಗೆ ಹೈಪೋ ಕ್ಲೋರೈಡ್ ದ್ರಾವಣ ಸಿಂಪಡಣೆ ಹಾಗೂ ಫಾಗಿಂಗ್ ಕಾರ್ಯ ನಡೆಸಲಾಯಿತು.
ಕೊರೊನಾ ಭೀತಿ: ಹುಬ್ಬಳ್ಳಿ ಮಹಾನಗರ ಪಾಲಿಕೆಯಿಂದ ರಸ್ತೆಗಳಿಗೆ ಹೈಪೋ ಕ್ಲೋರೈಡ್ ಸಿಂಪಡನೆ - ಹುಬ್ಬಳ್ಳಿ ಸುದ್ದಿ
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನಗರದ ಹಲವು ಬಡಾವಣೆಗಳ ರಸ್ತೆಗಳಲ್ಲಿ ಹೈಪೋ ಕ್ಲೋರೈಡ್ ದ್ರಾವಣ ಸಿಂಪಡಣೆ ಮಾಡಲಾಯಿತು.
ಕೊರೊನಾ ಭೀತಿ:ಹುಬ್ಬಳ್ಳಿ ಮಹಾನಗರ ಪಾಲಿಕೆ ವತಿಯಿಂದ ರಸ್ತೆಗಳಿಗೆ ಹೈಪೋ ಕ್ಲೋರೈಡ್ ಸಿಂಪಡನೆ
ವಾರ್ಡ್ ನಂಬರ್ 55ರ ಬಾಮ್ಮಪುರ ಓಣಿ, ಗೌಡ್ರ ಓಣಿ, ಶೆಲ್ವಂಟರ್ ಓಣಿ, ಪಗಡಿ ಗಲ್ಲಿ ಸರ್ಕಲ್, ಹಿರೇಪೇಟ್ ಮುಖ್ಯ ರಸ್ತೆ, ಐದು ಮನೆಸಾಲು, ತಂಬಡ್ ಓಣಿ ಹಾಗೂ ನವಗರದ ಚೆನ್ನಮ್ಮ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ಜನತಾ ಮಾರುಕಟ್ಟೆ, ಕೊಪ್ಪಿಕರ್ ರಸ್ತೆ ಸೇರಿದಂತೆ ಸೇರಿದಂತೆ ಇತರ ಕಡೆ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ರಸ್ತೆಯ ಪಕ್ಕ ಸಿಂಪಡಣೆ ಮಾಡಿ ವೈರಸ್ ಹರಡದಂತೆ ಹುಬ್ಬಳ್ಳಿ-ಧಾರವಾಡ ಮಹಾ ನಗರ ಪಾಲಿಕೆ ಕ್ರಮಕೈಗೊಂಡಿದೆ.