ಹುಬ್ಬಳ್ಳಿ: ನಗರದಲ್ಲಿ 27 ವರ್ಷದ ವ್ಯಕ್ತಿಗೆ ಕೊವಿಡ್-19 ಸೋಂಕು ದೃಢಪಟ್ಟಿದ್ದು ಆ ಪ್ರದೇಶವನ್ನು 'ನಿರ್ಬಂಧಿತ ಪ್ರದೇಶ'ವೆಂದು ಜಿಲ್ಲಾಧಿಕಾರ ಘೋಷಿಸಿದೆ.
ಹುಬ್ಬಳ್ಳಿ-ಧಾರವಾಡ ಪೌರಕಾರ್ಮಿಕರಿಗೆ ಮುಖಗವಸು ವಿತರಣೆ - ಕೊವಿಡ್-19
27 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ದೃಡಪಟ್ಟಿದ್ದು ಹುಬ್ಬಳ್ಳಿ ನಗರದ ಕಮರಿಪೇಟೆಯ ಮುಲ್ಲಾ ಓಣಿಯನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಘೋಷಿಸಲಾಗಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
ಕಮರಿಪೇಟೆಯ ಮುಲ್ಲಾ ಓಣಿಯ 27 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ದೃಡಪಟ್ಟಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಸುರಕ್ಷತಾ ದೃಷ್ಟಿಯಿಂದ ಉಚಿತವಾಗಿ ಮುಖ ರಕ್ಷಣಾ ಕವಚಗಳನ್ನು ವಿತರಿಸಿದೆ.
ಹು-ಧಾ ಪೌರಕಾರ್ಮಿಕರಿಗೆ ಮಾಸ್ಕ್ ವಿರತಣೆ
ಪೌರಕಾರ್ಮಿಕರು ಮತ್ತು ಅಗ್ನಿಶಾಮಕ ತುರ್ತು ಸೇವೆಗಳ ಸಿಬ್ಬಂದಿ ಫೇಸ್ ಶೀಲ್ಡ್ ಧರಿಸಿ, ಹೈಪೋಕ್ಲೋರೈಟ್ ದ್ರಾವಣ ಸಿಂಪಡಿಸುತ್ತಿದ್ದಾರೆ. ಧ್ವನಿವರ್ಧಕ ಮೂಲಕ ಜವಜಾಗೃತಿಯನ್ನೂ ಮೂಡಿಸಲಾಗುತ್ತಿದೆ.