ಹುಬ್ಬಳ್ಳಿ: ಕೊರೊನಾ ಅಟ್ಟಹಾಸ ಕಡಿಮೆಯಾಯಿತು ಎಂದು ನಿಟ್ಟುಸಿರು ಬಿಡುತ್ತಿರುವ ಬೆನ್ನಲ್ಲೇ ರೂಪಾಂತರಿ ಒಮ್ರಿಕಾನ್ ಜನರಲ್ಲಿ ಆತಂಕವನ್ನುಂಟು ಮಾಡುತ್ತಿದೆ. ಈ ನಡುವೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಯುವಕರ ತಂಡವೊಂದು, ತಮ್ಮ ಸ್ವಂತ ವಾಹನವನ್ನು ತೆಗೆದುಕೊಂಡು ಮನೆ ಮನೆಗೆ ಹೋಗಿ ಲಸಿಕೆ ಹಾಕುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಹುಬ್ಬಳ್ಳಿ ಚಿಟಗುಪ್ಪಿ ಆಸ್ಪತ್ರೆಯಿಂದ ವ್ಯಾಕ್ಸಿನ್ ತೆಗೆದುಕೊಂಡು, ಸ್ಲಂಗಳಿಗೆ ಹೋಗಿ ಲಸಿಕೆ ನೀಡುವ ಮಹತ್ವದ ಕಾರ್ಯದಲ್ಲಿ ಯುವಕರ ಗುಂಪೊಂದು ತೊಡಗಿದೆ. ಶ್ರೀಶೈಲ ಅಂಕಲಗಿ, ಮಲ್ಲಿಕಾರ್ಜುನ ಅಂಕಲಗಿ, ಮಂಜುನಾಥ ತರಂಗಿ ಹಾಗೂ ಕೃಷ್ಣ ಗೆಳೆಯರ ಬಳಗ ಇವರು, ಪ್ರತಿ ದಿನಕ್ಕೆ 150 ಕ್ಕೂ ಹೆಚ್ಚು ವ್ಯಾಕ್ಸಿನ್ ನೀಡಿ ಕೊರೊನಾ ಸೋಂಕು ತಡೆಗಟ್ಟಲು ಶ್ರಮಿಸುತ್ತಿದ್ದಾರೆ. ಪ್ರಮುಖವಾಗಿ ಸ್ಲಂ ಪ್ರದೇಶಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಇವರ ಕಾರ್ಯಕ್ಕೆ ಚಿಟಗುಪ್ಪಿ ಆಸ್ಪತ್ರೆ ವೈದ್ಯರು ಸಹ ಸಾಥ್ ನೀಡಿದ್ದಾರೆ.