ಕರ್ನಾಟಕ

karnataka

ETV Bharat / city

ಗದಗನಿಂದ ತವರು ಮನೆ ಬಾಗಲಕೋಟೆಗೆ ಬಂದ ಗರ್ಭಿಣಿಗೆ ಸೋಂಕು.. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ..

ಡೆಂಘೀ ಇರಬಹುದೆಂದು ಈ ಮಹಿಳೆಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ​ ಕರೆತಂದು ಗಂಟಲು ದ್ರವದ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ದೃಢಪಟ್ಟಿದೆ.

kims
ಕಿಮ್ಸ್​

By

Published : May 4, 2020, 2:24 PM IST

ಬಾಗಲಕೋಟೆ :ಹೆರಿಗೆಗೆಂದು ಗದಗ ಜಿಲ್ಲೆಯ ರೋಣ ತಾಲೂಕಿನ ಗ್ರಾಮವೊಂದರ ತವರು ಮನೆಗೆ ಬಂದಿದ್ದ ಗರ್ಭಿಣಿಗೆ ಕೊರೊನಾ ಸೋಂಕಿರುವುದು ಪತ್ತೆಯಾಗಿದೆ. ಈಕೆಗೆ ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಾಗಲಕೋಟ ಜಿಲ್ಲೆ ನಿವಾಸಿಯಾದ ಗರ್ಭಿಣಿ ರೋಣ ತಾಲೂಕಿನ ಕೃಷ್ಣಾಪುರ ಗ್ರಾಮದ ತವರು ಮನೆಗೆ ಹೆರಿಗೆಗೆ ಬಂದಿದ್ದರು. ತೀವ್ರ ಜ್ವರ ಕಾಣಿಸಿಕೊಂಡ ಕಾರಣದಿಂದ ಆಕೆ ಖಾಸಗಿ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಧಾವಿಸಿದ್ದರು. ಡೆಂಘೀ ಇರಬಹುದೆಂದು ಈ ಮಹಿಳೆಯನ್ನು ಹುಬ್ಬಳ್ಳಿ ಕಿಮ್ಸ್ಆಸ್ಪತ್ರೆಗೆ​ ಕರೆತಂದು ಗಂಟಲು ದ್ರವದ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ದೃಢಪಟ್ಟಿದೆ.

ಗದಗ ಗ್ರಾಮೀಣ ಭಾಗದಲ್ಲಿ ಪತ್ತೆಯಾದ ಮೊದಲ ಕೊರೊನಾ ಸೋಂಕಿನ ಪ್ರಕರಣ ಇದಾಗಿದೆ. ಈಕೆಯ ಜೊತೆಗೆ ಸಂಪರ್ಕದಲ್ಲಿದ್ದವರನ್ನೂ ತಪಾಸಣೆ ಮಾಡಲಾಗುತ್ತಿದೆ. ಮಹಿಳೆಗೆ ಕಿಮ್ಸ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರೆದಿದೆ.

ABOUT THE AUTHOR

...view details