ಕರ್ನಾಟಕ

karnataka

ETV Bharat / city

ಹುಬ್ಬಳ್ಳಿ: ಕೋವಿಡ್​ ಸೋಂಕಿತ ಪತ್ನಿ ಭೇಟಿಗೆ ಬಂದಿದ್ದ ಪತಿ ಆತ್ಮಹತ್ಯೆಗೆ ಯತ್ನ - ಕೊರೊನಾ ಸೋಂಕಿತೆ ಪತಿ ಆತ್ಮಹತ್ಯೆ ಯತ್ನ

ಕೋವಿಡ್​ ಸೋಂಕಿತ ಪತ್ನಿಯನ್ನು ನೋಡಲು ಬಂದಿದ್ದ ಪತಿ ಕಿಮ್ಸ್​​ ಆಸ್ಪತ್ರೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯಲ್ಲಿ ಜರುಗಿದೆ.

corona infected women husband attempt suicide in hubli KIMS
ಕಿಮ್ಸ್​​ ಆಸ್ಪತ್ರೆ

By

Published : Aug 25, 2020, 9:11 PM IST

ಹುಬ್ಬಳ್ಳಿ: ನಗರದ ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತ ಪತ್ನಿಯನ್ನು ಭೇಟಿಯಾಗಲು ಬಂದಿದ್ದ ಪತಿ ಆಸ್ಪತ್ರೆಯ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಮುತ್ತುರಾಜ ಶಿವಣ್ಣವರ (26) ಆತ್ಮಹತ್ಯೆಗ ಯತ್ನಿಸಿದ ವ್ಯಕ್ತಿ. ಕಿಮ್ಸ್​ ಪಿಎಂಎಸ್‌ಎಸ್​ವೈ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ಪತ್ನಿಯ ಭೇಟಿಗೆ ಇಂದು ಬೆಳಗ್ಗೆ ಬಂದಿದ್ದನು.

ಬೆಳಗ್ಗೆ 9 ಗಂಟೆ ಸುಮಾರಿಗೆ ಏಕಾಏಕಿ ಆಸ್ಪತ್ರೆಯ ಮಹಡಿಯಿಂದ ಜಿಗಿದಿದ್ದಾನೆ. ಅದೃಷ್ಟವಶಾತ್ ಮೇಲಿಂದ ಬೀಳುವಾಗ ಕೆಳ ಮಹಡಿಯ ಬಳಿಯಿದ್ದ ಗ್ಯಾಲರಿಗೆ ತಾಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕೈ ಕಾಲಿಗೆ ಪೆಟ್ಟು ಬಿದ್ದಿದೆ. ತಕ್ಷಣ ಅಲ್ಲಿದ್ದ ಅಟೆಂಡರ್ ವ್ಯಕ್ತಿಯನ್ನು ತುರ್ತು ಚಿಕಿತ್ಸಾ ವಾರ್ಡ್​ಗೆ ಕರೆತಂದಿದ್ದಾರೆ ಎಂದು ಕಿಮ್ಸ್​ ಮೂಲಗಳು ತಿಳಿಸಿವೆ. ಈ ಕುರಿತು ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details