ಹುಬ್ಬಳ್ಳಿ:ಕೊರೊನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ನಗರದ ಪ್ರಸಿದ್ಧ ಧಾರ್ಮಿಕ ಕೇಂದ್ರ ಸಿದ್ಧಾರೂಢ ಸ್ವಾಮಿ ಮಠದ ಗದ್ದುಗೆಗೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.
ಸಿದ್ಧಾರೂಢ ಸ್ವಾಮಿ ಮಠಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧ - ಮಠಕ್ಕೆ ನಿತ್ಯ ಐದು ಸಾವಿರ ಜನ ಬರುತ್ತಿದ್ದರು
ಕೊರೊನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ನಗರದ ಪ್ರಸಿದ್ಧ ಧಾರ್ಮಿಕ ಕೇಂದ್ರ ಸಿದ್ಧಾರೂಢ ಸ್ವಾಮಿ ಮಠದ ಗದ್ದುಗೆಗೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಕೊರೊನಾ ಭೀತಿ, ಸಿದ್ಧಾರೂಢ ಸ್ವಾಮೀಜಿ ಮಠಕ್ಕೆ ಭಕ್ತರ ಪ್ರವೇಶ ನಿರ್ಬಂಧ..!
ಸರ್ಕಾರ ಹೊರಡಿಸಿರುವ ಆದೇಶದ ಮೇರೆಗೆ ಭಕ್ತರಿಗೆ ಗದ್ದುಗೆ ಪ್ರವೇಶ ನಿರಾಕರಿಸಲಾಗಿದ್ದು, ಬೆಳಗ್ಗೆ ಮತ್ತು ಸಂಜೆ ಪೂಜಾ ಕೈಂಕರ್ಯಗಳನ್ನು ಮಾತ್ರ ನಡೆಸಲಾಗುತ್ತಿದೆ. ಆದರೆ ಭಕ್ತರಿಗೆ ಪ್ರವೇಶವಿಲ್ಲ ಎಂದು ಮಠದ ಟ್ರಸ್ಟ್ ಕಮಿಟಿ ತಿಳಿಸಿದೆ. ಮಠದಲ್ಲಿ ದಾಸೋಹವನ್ನು ಮುಂದುವರಿಸಬೇಕೇ, ಬೇಡವೇ ಎನ್ನುವುದರ ಬಗ್ಗೆ ಚರ್ಚಿಸಲು ಇಂದು ಸಂಜೆ 6 ಗಂಟೆಗೆ ಕಮಿಟಿ ಸಭೆ ಕರೆಯಲಾಗಿದೆ. ಮಠಕ್ಕೆ ನಿತ್ಯ 5 ಸಾವಿರ ಜನ ಬರುತ್ತಿದ್ದರು. ಆದರೀಗ ಒಂದು ಸಾವಿರಕ್ಕೆ ಇಳಿದಿದೆ.