ಕರ್ನಾಟಕ

karnataka

ETV Bharat / city

ಕೊರೊನಾದಿಂದ ಗುಣಮುಖರಾದವರಿಂದಲೇ ಜನಜಾಗೃತಿ... ಹು-ಧಾ ಪಾಲಿಕೆಯಿಂದ ವಿನೂತನ ಪ್ರಯತ್ನ - hubli news

ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಹೊರಬಂದವರ ವಿಶೇಷ ತಂಡಗಳನ್ನು ರಚಿಸಿ, ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಆತ್ಮಸ್ಥೈರ್ಯ ಮೂಡಿಸುವ ಯೋಜನೆಯೊಂದನ್ನು ಹು-ಧಾ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಜಿಲ್ಲಾಡಳಿತವು ರೂಪಿಸಿದೆ.

corona awareness hubli-dharwad District administration
ಕೊರೊನಾದಿಂದ ಗುಣಮುಖರಾದವರಿಂದಲೇ ಜನಜಾಗೃತಿ..ಹು-ಧಾ ಪಾಲಿಕೆಯಿಂದ ವಿನೂತನ ಪ್ರಯತ್ನ

By

Published : Jul 22, 2020, 6:41 PM IST

ಹುಬ್ಬಳ್ಳಿ: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೊರೊನಾ ಕುರಿತು ಜನರಿಗೆ ಎಷ್ಟೇ ಜಾಗೃತಿ ಮೂಡಿಸಿದ್ರೂ ಜನರು ಕೊರೊನಾ ಬಂದರೆ ಸಾಯುತ್ತೇವೆ ಎಂಬ ಭಯದಲ್ಲಿದ್ದಾರೆ. ಹೀಗಾಗಿ ಹು-ಧಾ ಮಹಾನಗರ ಪಾಲಿಕೆ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

ಕೊರೊನಾದಿಂದ ಗುಣಮುಖರಾದವರಿಂದಲೇ ಜನಜಾಗೃತಿ.. ಹು-ಧಾ ಪಾಲಿಕೆಯಿಂದ ವಿನೂತನ ಪ್ರಯತ್ನ

ಕೊರೊನಾ ಭಯವನ್ನು ಹೋಗಲಾಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಆತ್ಮಸ್ಥೈರ್ಯ ಹೆಚ್ಚಿಸಲು ಜಿಲ್ಲಾಡಳಿತವು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ವಿನೂತನ ಪ್ರಯತ್ನವನ್ನು ಕೈಗೆತ್ತಿಕೊಂಡಿದೆ. ಇದರಿಂದ‌ ಜನರಲ್ಲಿರುವ ಆತಂಕ ದೂರ ಮಾಡುವ ಪ್ರಯತ್ನಕ್ಕೆ ಮುಂದಾಗಿದೆ. ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಹೊರಬಂದವರ ವಿಶೇಷ ತಂಡಗಳನ್ನು ರಚಿಸಿ, ಎನ್‌ಜಿಓ ಸಹಭಾಗಿತ್ವದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಆತ್ಮಸ್ಥೈರ್ಯ ಮೂಡಿಸುವ ಯೋಜನೆಯೊಂದನ್ನು ಜಿಲ್ಲಾಡಳಿತ ರೂಪಿಸಿದೆ.

ಕೊರೊನಾದಿಂದ ಗುಣಮುಖರಾಗಿ ಹೊರಗೆ ಬಂದವರಿಂದ ಬೀದಿ ನಾಟಕ, ಜಾಗೃತಿ ಜಾಥಾ, ಫೇಸ್‌ಬುಕ್‌ ಲೈವ್‌, ವಿಡಿಯೋ ಸಂದೇಶ ಹೀಗೆ ವಿವಿಧ ಯೋಜನೆಗಳನ್ನು ಜಿಲ್ಲಾಡಳಿತ ಹಾಕಿಕೊಂಡಿದೆ. ಈಗಾಗಲೇ ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಗುಣಮುಖರಾದವರಲ್ಲಿ ಆಸಕ್ತ ಹಾಗೂ ಸುಶಿಕ್ಷತರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಯೋಜನೆಯ ಮಾಹಿತಿ ಹಾಗೂ ತರಬೇತಿ ನೀಡಲಾಗುತ್ತದೆ. 10, 15 ಮಂದಿಯ ಒಂದೊಂದು ತಂಡಗಳನ್ನಾಗಿ ಮಾಡಿ, ವಾರ್ಡ್‌ ಮಟ್ಟದಲ್ಲಿ ಅಂತರ ಕಾಯ್ದುಕೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಿದೆ.

ಕೋವಿಡ್‌ ಲಕ್ಷಣರಹಿತ ಸೋಂಕಿತರಾಗಿ ಗುಣಮುಖರಾದವರೇ ಈ ತಂಡದಲ್ಲಿ ಇರುವುದರಿಂದ, ಅವರು ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಕಳೆದ ದಿನಗಳ ಅನುಭವ, ಅಲ್ಲಿನ ವ್ಯವಸ್ಥೆ, ಆರೋಗ್ಯ ಇಲಾಖೆಯ ಆರೈಕೆ, ಅಲ್ಲಿ ಆತ್ಮಸ್ಥೈರ್ಯಕ್ಕಾಗಿ ಹಮ್ಮಿಕೊಂಡಿರುವ ಚಟುವಟಿಕೆಗಳಿಂದ ತಮ್ಮಲ್ಲಾದ ಬದಲಾವಣೆಗಳನ್ನು ಸಮಾಜಕ್ಕೆ ತಿಳಿಸಲಿದ್ದಾರೆ. ಕೋವಿಡ್‌ ಮಾರಾಣಾಂತಿಕವಲ್ಲ. ಅದು ಗುಣಪಡುವ ಕಾಯಿಲೆ ಎಂದು ಜನರಿಗೆ ತಿಳಿಸಲು ಅವರೇ ಮುಂಚೂಣಿಯಲ್ಲಿ ನಿಂತು ಹೇಳಿದರೆ ಉತ್ತಮ ಎನ್ನುವ ನಿಟ್ಟಿನಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ABOUT THE AUTHOR

...view details