ಕರ್ನಾಟಕ

karnataka

ETV Bharat / city

ಕೊರೊನಾ ಪರಿಹಾರ ನಿಧಿಗೆ ಹಾಲಿ ಹಾಗೂ ಮಾಜಿ ಶಾಸಕರಿಂದ ನೆರವು.. - mla amrutha deasi

ಚೆಕ್ ಸ್ವೀಕರಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಸರ್ಕಾರದ ಪರವಾಗಿ ಕೃತಜ್ಞತೆ ಸಲ್ಲಿಸಿದರು.

desai
desai

By

Published : Apr 2, 2020, 3:28 PM IST

ಧಾರವಾಡ: ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಸಲ್ಲಿಸಿದರು. ತಮ್ಮ ಕಬ್ಬಿನ ಬೆಳೆಯ ಲಾಭದಲ್ಲಿ ವೈಯಕ್ತಿಕವಾಗಿ 2 ಲಕ್ಷ ರೂ.ಗಳ ಚೆಕ್‌ನ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸಿದರು.

ಕೊರೊನಾ ಪರಿಹಾರ ನಿಧಿಗೆ ಶಾಸಕರಿಂದ ದೇಣಿಗೆ..

ಇದೇ ವೇಳೆ ಮಾಜಿ ಶಾಸಕ ಅಯ್ಯಪ್ಪ ಬಿ.ದೇಸಾಯಿ ಅವರು ₹50 ಸಾವಿರ ಮೊತ್ತದ ಚೆಕ್‌ನ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಾಗೂ ರೂ.50 ಸಾವಿರ ಮೊತ್ತದ ಚೆಕ್‌ನ ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ನೀಡಿದರು.

ಕೊರೊನಾ ಪರಿಹಾರ ನಿಧಿಗೆ ದೇಣಿಗೆ..

ಚೆಕ್ ಸ್ವೀಕರಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಸರ್ಕಾರದ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಈ ರೀತಿ ಸಾರ್ವಜನಿಕರು ದೇಣಿಗೆ ನೀಡಿ ಪರಿಹಾರ ಕಾರ್ಯಗಳಿಗೆ ನೆರವಾಗಬೇಕು ಎಂದರು. ಶಾಸಕರ ಹಾಗೂ ಮಾಜಿ ಶಾಸಕರ ಸಾಮಾಜಿಕ ಕಳಕಳಿ ಶ್ಲಾಘಿಸಿದರು.

ABOUT THE AUTHOR

...view details