ಹುಬ್ಬಳ್ಳಿ:ನಗರದ ಕಂಟೈನ್ಮೆಂಟ್ ವಲಯವಾದ ನಗರದ ಬಮ್ಮಾಪುರ ಓಣಿ ಸಮೀಪದ ಕುಂಬಾರ ಓಣಿಯಲ್ಲಿ ರಸ್ತೆಗೆ ಅಡ್ಡವಾಗಿ ಇಟ್ಟಿದ್ದ ಬ್ಯಾರಿಕೇಡ್ಗಳನ್ನು ಯುವಕರ ಗುಂಪು ಎಳೆದಾಡಿ ಪುಂಡಾಟ ಮೆರೆದಿದೆ.
ಕಂಟೈನ್ಮೆಂಟ್ ಏರಿಯಾದಲ್ಲಿ ಗಲಾಟೆ ಮಾಡಿದ ಮೂವರ ವಿರುದ್ಧ ಪ್ರಕರಣ - Hubli Containment Area Uproar
ನಗರದ ಕಂಟೈನ್ಮೆಂಟ್ ಏರಿಯಾದಲ್ಲಿ ಬ್ಯಾರಿಕೇಡ್ ಎಳೆದು ಪುಂಡಾಟ ಮೆರೆದಿದ್ದ ಮೂವರು ಯುವಕರ ವಿರುದ್ಧ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹುಬ್ಬಳ್ಳಿ
ಕೊರೊನಾ ವೈರಸ್ ಪತ್ತೆಯಾದ ವಲಯವನ್ನು ಜಿಲ್ಲಾಡಳಿತ ಸೀಲ್ ಡೌನ್ ಮಾಡಿ, ಬೇರೆಯವರು ಈ ಪ್ರದೇಶದಲ್ಲಿ ಸಂಚರಿಸದಂತೆ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ಆದರೆ ಕೆಲ ಯುವಕರು ಅದನ್ನು ತೆಗೆದು ಗಲಾಟೆ ಮಾಡಿದ್ದಾರೆ.
ಇದನ್ನು ಪ್ರಶ್ನಿಸಿದವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಸ್ಥಳೀಯ ಯುವಕರ ಜತೆ ಜಗಳವಾಡಿದ್ದ ಅನ್ಯ ಕೋಮಿನ ಮೂವರು ಯುವಕರ ವಿರುದ್ಧ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ತನಿಖೆ ಕೈಗೊಂಡಿದ್ದಾರೆ.