ಕರ್ನಾಟಕ

karnataka

ETV Bharat / city

SSLC Exam Centre ಗೊಂದಲ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಯ ಆತಂಕ ದೂರ ಮಾಡಿದ ಕಾನ್ಸ್​ಟೇಬಲ್​

ಹುಬ್ಬಳ್ಳಿಯಲ್ಲಿ ಪರೀಕ್ಷಾ ಕೇಂದ್ರದ ಹುಡುಕಾಟದಲ್ಲಿದ್ದ SSLC ವಿದ್ಯಾರ್ಥಿನಿಗೆ ಸಹಾಯ ಮಾಡಿ, ಪೊಲೀಸ್​ ಕಾನ್ಸ್​ಟೇಬಲೊಬ್ಬರು ಮಾನವೀಯತೆ ಮೆರೆದಿದ್ದಾರೆ.

Hubli
ವಿದ್ಯಾರ್ಥಿನಿಯನ್ನು ನಿಗದಿತ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿ, ಮಾನವೀಯತೆ ಮೆರೆದ ಕಾನ್ಸ್​ಟೇಬಲ್​

By

Published : Jul 19, 2021, 12:42 PM IST

ಹುಬ್ಬಳ್ಳಿ:ಇಂದಿನಿಂದ ರಾಜ್ಯಾದ್ಯಂತ SSLC ಪರೀಕ್ಷೆ ಪ್ರಾರಂಭವಾಗಿದೆ. ಹುಬ್ಬಳ್ಳಿಯಲ್ಲಿ ಪರೀಕ್ಷಾ ಕೇಂದ್ರದ ಹುಡುಕಾಟದಲ್ಲಿದ್ದ ವಿದ್ಯಾರ್ಥಿನಿಯನ್ನು ನಿಗದಿತ ಪರೀಕ್ಷಾ ಕೇಂದ್ರಕ್ಕೆ ತಂದು ಬಿಡುವ ಮೂಲಕ ಪೊಲೀಸ್​ ಸಿಬ್ಬಂದಿ ಆತಂಕ ದೂರ ಮಾಡಿದ್ದಾರೆ.

ವಿದ್ಯಾರ್ಥಿನಿಯನ್ನು ನಿಗದಿತ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿ, ಮಾನವೀಯತೆ ಮೆರೆದ ಕಾನ್ಸ್​ಟೇಬಲ್​

ನಗರದ ಲ್ಯಾಮಿಂಗ್ಟನ್ ಶಾಲೆಗೆ ವಿದ್ಯಾರ್ಥಿನಿಯೊಬ್ಬಳು ಎಸ್ಎಸ್​ಎಲ್​ಸಿ ಪರೀಕ್ಷೆ ಬರೆಯಲು ಬಂದಿದ್ದಳು. ಆದರೆ, ಆಕೆಯ ಪರೀಕ್ಷಾ ದಾಖಲಾತಿ ಸಂಖ್ಯೆ ಶಾಲೆಯ ಯಾವುದೇ ಕೊಠಡಿಯಲ್ಲಿ ಕಾಣದೇ ಇರುವುದರಿಂದ ಗೊಂದಲಕ್ಕೀಡಾಗಿದ್ದಳು. ಆಗ ಅಲ್ಲಿದ್ದ ಪೊಲೀಸ್​ ಕಾನ್ಸ್​ಟೇಬಲೊಬ್ಬರು ವಿದ್ಯಾರ್ಥಿನಿಯ ನೆರವಿಗೆ ದಾವಿಸಿದ್ದಾರೆ.

ವಿದ್ಯಾರ್ಥಿನಿಯ ದಾಖಲಾತಿ ಸಂಖ್ಯೆ ಬೇರೊಂದು ಶಾಲೆಯಲ್ಲಿರುವುದನ್ನು ಖಚಿತ ಪಡಿಸಿಕೊಂಡು ತಮ್ಮ ಬೈಕ್​ನಲ್ಲಿಯೇ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ್ದಾರೆ. ಈ ಮೂಲಕ ಗೊಂದಲದಲ್ಲಿದ್ದ ವಿದ್ಯಾರ್ಥಿನಿಗೆ ಸಹಾಯ ಮಾಡಿ, ಮಾನವೀಯತೆ ಮೆರೆದಿದ್ದಾರೆ. ಪೊಲೀಸ್​ ಕಾನ್ಸ್​ಟೇಬಲ್​​​​ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:SSLC ಪರೀಕ್ಷೆ ಬರೆಯುತ್ತಿದ್ದಾರೆ ಈ 60 ವರ್ಷದ ವೃದ್ಧ! ಕಾರಣ ಇಷ್ಟೇ?

ABOUT THE AUTHOR

...view details