ಹುಬ್ಬಳ್ಳಿ: ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಆದರೆ ಚುನಾವಣೆ ನಡೆಯುವ ಮುನ್ನವೇ ಕಾಂಗ್ರೆಸ್ ನಾಯಕರೊಬ್ಬರು ಈಗಾಗಲೇ ಎಂಎಲ್‌ಸಿ ಅಂತ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಚುನಾವಣೆಗೆ ಮುನ್ನವೇ ಎಂಎಲ್‌ಸಿ!: ಕಾರಿಗೆ ಪಾಸ್ ಅಂಟಿಸಿಕೊಂಡು ಕೈ ಮುಖಂಡ ಓಡಾಟ? - ಕಾಂಗ್ರೆಸ್ ನಾಯಕ ನಾಗರಾಜ್ ಗೌರಿ
ಚುನಾವಣೆಯಲ್ಲಿ ಗೆದ್ದ ಬಳಿಕ ಶಾಸಕ, ಸಂಸದ, ಎಂಎಲ್‌ಸಿ ಅಂತ ಕಾರಿನ ಮೇಲೆ ಬೋರ್ಡ್ ಬರೆಯಿಸಿ, ಪಾಸ್ ಇಟ್ಟುಕೊಂಡು ಓಡಾಡುವವರನ್ನು ನೋಡಿದ್ದೇವೆ. ಆದರೆ ಹುಬ್ಬಳ್ಳಿಯಲ್ಲಿ ಪರಿಷತ್ ಚುನಾವಣೆಗೂ ಮೊದಲೇ ಕಾಂಗ್ರೆಸ್ ಮುಖಂಡ ನಾಗರಾಜ್ ಗೌರಿ ಅವರು ತಾವು ಎಂಎಲ್‌ಸಿ ಎಂದು ತಮ್ಮ ಕಾರಿನ ಮೇಲೆ ಪಾಸ್ ಹಾಕಿಕೊಂಡು ಓಡಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
![ಚುನಾವಣೆಗೆ ಮುನ್ನವೇ ಎಂಎಲ್‌ಸಿ!: ಕಾರಿಗೆ ಪಾಸ್ ಅಂಟಿಸಿಕೊಂಡು ಕೈ ಮುಖಂಡ ಓಡಾಟ? Congress Leader Nagaraj gowri have mlc pass before election in Hubli](https://etvbharatimages.akamaized.net/etvbharat/prod-images/768-512-13560375-thumbnail-3x2-hbl.jpg)
ಚುನಾವಣೆಗೆ ಮುನ್ನವೇ ಎಂಎಲ್‌ಸಿ!; ಕಾರಿಗೆ ಪಾಸ್ ಅಂಟಿಸಿಕೊಂಡು ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಓಡಾಟ
ಕಾಂಗ್ರೆಸ್ ಮುಖಂಡ ನಾಗರಾಜ ಗೌರಿಯವರು ಚುನಾವಣೆ ನಡೆಯುವ ಮೊದಲೇ ನಾನು ಎಂಎಲ್‌ಸಿ ಎಂದು ತಮ್ಮ ಇನ್ನೋವಾ ಕಾರಿಗೆ ಪಾಸ್ ಹಾಕಿಕೊಂಡು ತಿರುಗಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ವಿಧಾನ ಪರಿಷತ್ ಕಾರ್ಯದರ್ಶಿ ಶ್ರೀನಿವಾಸ ಹೆಸರಿನ ಸಹಿ ಇರುವ ಪಾಸ್ ಇದಾಗಿದೆ. ಆದರೆ ಪಾಸ್ ಮೇಲೆ ಎಂಎಲ್‌ಸಿ ಎಂದು ಇದೆ. ಅಲ್ಲದೆ ನಾಗರಾಜ ಅವರ ಇನ್ನೋವಾ ಕಾರಿನ ನಂಬರ್ ಹಾಗೂ ಪಾಸ್ ಕಾರಿನ ಮೇಲೆ ಇರುವ ನಂಬರ್ ಕೂಡ ಒಂದೇ ಆಗಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
Last Updated : Nov 6, 2021, 5:45 PM IST