ಹುಬ್ಬಳ್ಳಿ :ರಾಜ್ಯ ಸರ್ಕಾರ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸಹಾಯಧನ ಬಿಡುಗಡೆ ಮಾಡಿದೆ. ಆದರೆ, ಅದರಲ್ಲಿರುವ ಹಲವಾರು ಗೊಂದಲಗಳಿಂದ ನಿಜವಾದ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗುವಂತಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಗೊಂದಲ ನಿವಾರಣೆ ಮಾಡಬೇಕೆಂದು ಹುಬ್ಬಳ್ಳಿ ಆಟೋ ರಿಕ್ಷಾ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯ್ತು.
ಸರ್ಕಾರದ ಪರಿಹಾರದಲ್ಲಿ ಗೊಂದಲ.. ಹುಬ್ಬಳ್ಳಿಯಲ್ಲಿ ಆಟೋ ಚಾಲಕರ ಪ್ರತಿಭಟನೆ - Hubballi Tahsildar
ಇಂತಹ ಪರಿಸ್ಥಿತಿಯಲ್ಲಿ ಪರಿಹಾರ ಹಣವನ್ನು ಪಡೆಯಲು ಸರ್ಕಾರ ವಾಹನ ದಾಖಲಾತಿ ಕೇಳಿರುವುದರಿಂದ ಶೇ.50ರಷ್ಟು ಜನರು ಪರಿಹಾರ ಧನದಿಂದ ವಂಚಿತವಾಗುವಂತಾಗಿದೆ. ಕೂಡಲೇ ರಾಜ್ಯ ಸರ್ಕಾರ ನಿಜವಾದ ಫಲಾನುಭವಿಗಳಿಗೆ ಹಾಗೂ ಪ್ರತಿಯೊಬ್ಬ ಚಾಲಕರಿಗೆ ಅನುದಾನ ನೀಡಬೇಕು.
ನಗರದ ತಹಶೀಲ್ದಾರರ ಕಚೇರಿ ಎದುರಿಗೆ ಪ್ರತಿಭಟನೆ ಮಾಡಿದ ಅವರು, ಆಟೋ, ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಸಿಲುಕಿದಾಗ ಸರ್ಕಾರ ಅವರಿಗೆ ಪರಿಹಾರ ರೂಪದಲ್ಲಿ 5,000 ರೂಪಾಯಿ ನೀಡಿದೆ. ಅದನ್ನು ಸ್ವಾಗತಿಸಲಾಗುವುದು. ಆದರೆ, ಈ ಸಹಾಯಧನ ಪಡೆಯಲು ಸರ್ಕಾರ ಹಲವಾರು ಮಾನದಂಡಗಳನ್ನು ಹಾಕಿದೆ. ಇದರಿಂದಾಗಿ ಬ್ಯಾಡ್ಜ್ ಲೈಸೆನ್ಸ್ ಹೊಂದಿರುವ ಶೇ. 50ರಷ್ಟು ಚಾಲಕರು ಸ್ವಂತ ವಾಹನ ಇಲ್ಲದೇ ಇರುವುದರಿಂದ ದಿನದ ಬಾಡಿಗೆ ಆಧಾರದ ಮೇಲೆ ಚಲಾಯಿಸಿ ಜೀವನ ನಡೆಸುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಪರಿಹಾರ ಹಣವನ್ನು ಪಡೆಯಲು ಸರ್ಕಾರ ವಾಹನ ದಾಖಲಾತಿ ಕೇಳಿರುವುದರಿಂದ ಶೇ.50ರಷ್ಟು ಜನರು ಪರಿಹಾರ ಧನದಿಂದ ವಂಚಿತವಾಗುವಂತಾಗಿದೆ. ಕೂಡಲೇ ರಾಜ್ಯ ಸರ್ಕಾರ ನಿಜವಾದ ಫಲಾನುಭವಿಗಳಿಗೆ ಹಾಗೂ ಪ್ರತಿಯೊಬ್ಬ ಚಾಲಕರಿಗೆ ಅನುದಾನ ನೀಡಬೇಕು ಎಂದು ತಹಶೀಲ್ದಾರರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.