ಹುಬ್ಬಳ್ಳಿ:ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಅಪಾಯಕಾರಿ ಕೊರೊನಾ ವೈರಸ್‌ನಿಂದ ಸಾಕಷ್ಟು ಎಚ್ಚರ ವಹಿಸಬೇಕಿರುವ ಕಾರಣ ಚೀನಾದಿಂದ ಆಗಮಿಸಿದ ಪ್ರಯಾಣಿಕರು ಕಡ್ಡಾಯವಾಗಿ ಕಿಮ್ಸ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ನಗರದ ವಿಮಾನ ನಿಲ್ದಾಣದಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ.
ಚೀನಾದಿಂದ ಬಂದವರಿಗೆ ಚಿಕಿತ್ಸೆ ಕಡ್ಡಾಯ.. ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ಸೂಚನಾ ಫಲಕ!
ಚೀನಾದಿಂದ ಆಗಮಿಸಿದ ಪ್ರಯಾಣಿಕರು ಕಡ್ಡಾಯವಾಗಿ ಕಿಮ್ಸ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ.
ನಿಲ್ದಾಣದಲ್ಲಿರುವ ಸೂಚನಾ ಫಲಕ
ಚೀನಾ, ಅದರಲ್ಲೂ ವುಹಾನ್ ನಗರದಿಂದ ಬಂದವರು ತಕ್ಷಣವೇ ಚಿಕಿತ್ಸೆ ಪಡೆದು ಮಾಹಿತಿ ಒದಗಿಸಬೇಕು. ಸೋಂಕಿನ ಲಕ್ಷಣಗಳು ಕಂಡು ಬಂದರೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೂ ಮಾಹಿತಿ ನೀಡುವುದು ಕಡ್ಡಾಯ ಎಂದು ತಿಳಿಸಲಾಗಿದೆ.
ನಿಲ್ದಾಣದಿಂದ ಹೊರಬರುವ ಪ್ರವೇಶದ್ವಾರದಲ್ಲಿಯೇ ಈ ಫಲಕ ಅಳವಡಿಸಲಾಗಿದೆ. ರೋಗದ ಲಕ್ಷಣಗಳು ಹೇಗಿರುತ್ತವೆ ಎನ್ನುವುದರ ಸಂಕೇತಗಳನ್ನು ತೋರಿಸಲಾಗಿದೆ.