ಕರ್ನಾಟಕ

karnataka

ETV Bharat / city

ದೂರವಾಣಿ ಮೂಲಕ ಧಾರವಾಡ ಜಿಲ್ಲೆಯ ಮಳೆ ಕುರಿತು ಮಾಹಿತಿ ಪಡೆದ ಸಿಎಂ - ಧಾರವಾಡ ಸುದ್ದಿ

ತಾವು ಆಸ್ಪತ್ರೆಯಲ್ಲಿದ್ದರೂ ಸಹ ಯಾವುದೇ ಸಮಯದಲ್ಲಿ ನೇರವಾಗಿ ಸಂಪರ್ಕಿಸಬಹುದು ಎಂದು ದೂರವಾಣಿ ಸಂಖ್ಯೆ ತಿಳಿಸಿದರು. ಅಲ್ಲದೆ, ಸಾರ್ವಜನಿಕರ ಜನಜೀವನಕ್ಕೆ ಆಡಳಿತ ಸದಾ ಸ್ಪಂದಿಸಬೇಕು..

CM received information about Dharwad district rainfall over the telephone
ದೂರವಾಣಿ ಮೂಲಕ ಧಾರವಾಡ ಜಿಲ್ಲೆಯ ಮಳೆ ಕುರಿತು ಮಾಹಿತಿ ಪಡೆದ ಸಿಎಂ

By

Published : Aug 5, 2020, 9:17 PM IST

ಧಾರವಾಡ :ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಸಂಜೆ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ್‌ ಅವರೊಂದಿಗೆ ದೂರವಾಣಿ ಮೂಲಕ ಜಿಲ್ಲೆಯ ಮಳೆ ಕುರಿತು ಮಾಹಿತಿ ಪಡೆದರು.

ಈ ವೇಳೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಪರಿಸ್ಥಿತಿ ನಿರ್ವಹಣೆ ಕೈಗೊಂಡಿರುವ ಕ್ರಮಗಳು, ಎಸ್​ಡಿಆರ್​ಎಫ್ ಮತ್ತು ಎನ್​ಡಿಆರ್​ಎಫ್ ತಂಡ ಹಾಗೂ ವಿವಿಧ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಸಿರುವ ಸಿಎಂ, ತಾವು ಆಸ್ಪತ್ರೆಯಲ್ಲಿದ್ದರೂ ಸಹ ಯಾವುದೇ ಸಮಯದಲ್ಲಿ ನೇರವಾಗಿ ಸಂಪರ್ಕಿಸಬಹುದು ಎಂದು ದೂರವಾಣಿ ಸಂಖ್ಯೆ ತಿಳಿಸಿದರು. ಅಲ್ಲದೆ, ಸಾರ್ವಜನಿಕರ ಜನಜೀವನಕ್ಕೆ ಆಡಳಿತ ಸದಾ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ABOUT THE AUTHOR

...view details