ಹುಬ್ಬಳ್ಳಿ:ಮುಖ್ಯಮಂತ್ರಿ ಬದಲಾವಣೆ ಗುಮ್ಮ, ಬಿಟ್ ಕಾಯಿನ್ ಹಗರಣ ಸದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಂಗೆಡಿಸಿದಂತೆ ಕಾಣುತ್ತಿದೆ. ಇಂದು ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಸಿಎಂ ಹಾಜರಾಗುವ ಮುನ್ನ ಮೊಬೈಲ್ನಲ್ಲಿ ಬ್ಯುಸಿ ಇದ್ದ ಕಾರಣ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಸುತ್ತಾಡಿದ ಪ್ರಸಂಗ ನಡೆಯಿತು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾರ್ಯಕಾರಣಿ ಸಭೆ ಆಯೋಜಿಸಿದ್ದ ಲಾಡ್ಜ್ನಲ್ಲಿ ಅವರಿಗಾಗಿ ಬುಕ್ ಮಾಡಲಾಗಿದ್ದ ನಿಗದಿತ ರೂಮಿಗೆ ಹೋಗುವ ಬದಲಾಗಿ, ಮೊಬೈಲ್ನಲ್ಲಿ ಫುಲ್ ಬ್ಯುಸಿಯಾಗಿ ಆವರಣದಲ್ಲೇ ಕೆಲಕಾಲ ಸುತ್ತಾಡಿದ್ದಾರೆ. ಬಳಿಕ ಹೋಟೆಲ್ನ ಶೌಚಾಲಯದ ಕಡೆಗೆ ತೆರಳಿ, ಅಲ್ಲಿಂದ ಮತ್ತೆ ಮೊಬೈಲ್‌ನಲ್ಲೇ ಮಾತನಾಡುತ್ತಾ ತಮ್ಮ ರೂಮ್ ಕಡೆ ತೆರಳಿದ್ದಾರೆ.