ಹುಬ್ಬಳ್ಳಿ: ಬಿಜೆಪಿ ಶಾಸಕ ಮತ್ತು ಎಂಎಲ್ಸಿ ನಡುವಿನ ಭಿನ್ನಾಭಿಪ್ರಾಯ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಹುಬ್ಬಳ್ಳಿಯ ಖಾಸಗಿ ಹೊಟೇಲ್ನಲ್ಲಿ ನಡೆಯಿತು. ರಾಣೆಬೆನ್ನೂರು ಶಾಸಕ ಅರುಣಕುಮಾರ ಹಾಗೂ ಎಂಎಲ್ಸಿ ಆರ್.ಶಂಕರ್ ನಡುವೆ ಗಲಾಟೆ ನಡೆದಿದೆ.
ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಖಾಸಗಿ ಹೊಟೇಲ್ನಲ್ಲಿ ನಡೆಯುತ್ತಿದ್ದ ಸಭೆಯಲ್ಲಿ, ಚುನಾವಣೆಯ ಉಸ್ತುವಾರಿ ಹಂಚಿಕೆ ವಿಚಾರದಲ್ಲಿ ಗಲಾಟೆ ಪ್ರಾರಂಭವಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಮುಖಂಡರ ಸಮ್ಮುಖದಲ್ಲಿಯೇ ಈ ಡ್ರಾಮಾ ನಡೆದಿದೆ. ಬಳಿಕ ಶಾಸಕ ಅರುಣಕುಮಾರ ಅವರನ್ನು ಹಾವೇರಿ ಜಿಲ್ಲಾ ಬಿಜೆಪಿ ಮುಖಂಡರು ಸಮಾಧಾನಪಡಿಸಲು ಮುಂದಾದರು.