ಹುಬ್ಬಳ್ಳಿ: ಹುಬ್ಬಳ್ಳಿಯ ಐತಿಹಾಸಿಕ ಗತವೈಭವ ಸಾರುವ ಚಿಟಗುಪ್ಪಿ ಆಸ್ಪತ್ರೆ (Chitaguppi Hospital) ಇನ್ಮುಂದೆ ನೆನಪು ಮಾತ್ರ. ಶಿಥಿಲಾವಸ್ಥೆ ತಲುಪಿರುವ ಆಸ್ಪತ್ರೆಯ ತೆರವು ಕಾರ್ಯಾಚರಣೆ ಇದೀಗ ಆರಂಭಗೊಂಡಿದೆ.
127 ವರ್ಷಗಳನ್ನು ಪೂರೈಸಿರುವ ಚಿಟಗುಪ್ಪಿ ಆಸ್ಪತ್ರೆಯನ್ನು ರಾವ್ ಬಹದ್ದೂರ್ ಶ್ರೀನಿವಾಸ ಬಾಲಾಜಿ ಚಿಟಗುಪ್ಪಿ ಔಷಧಾಲಯ (Rao Bahaddur Srinivas Balaji Chitaguppi Pharmacy) ಎಂಬ ಹೆಸರಿನಲ್ಲಿ ಪ್ರಾರಂಭವಾಗಿತ್ತು. ನಂತರ 1936 ರ ಅಗಸ್ಟ್ನಲ್ಲಿ ಆಸ್ಪತ್ರೆಯಾಗಿ ಬದಲಾಯಿತು. ಮುಂದೆ 1961 ರಲ್ಲಿ ಹಸ್ತಾಂತರಗೊಂಡಿತು. ಲಕ್ಷಾಂತರ ರೋಗಿಗಳಿಗೆ ಚಿಕಿತ್ಸೆ ನೀಡಿರುವ ಚಿಟಗುಪ್ಪಿ ಆಸ್ಪತ್ರೆ, ಇದೀಗ ಭೂತಾಯಿಯ ಗರ್ಭ ಸೇರುತ್ತಿದೆ.