ಹುಬ್ಬಳ್ಳಿ: ಕೊರೊನಾ ಜೀವ ಕಳೆಯುವ ಸುದ್ದಿಗಳನ್ನೇ ಹೆಚ್ಚು ನೀಡುತ್ತಿದೆ. ಆದರೆ, ಇದರ ನಡುವೆ ಜಿಲ್ಲೆಯಲ್ಲಿ ಸಾಕಷ್ಟು ಮಕ್ಕಳೂ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ. ಸಾಮಾನ್ಯವಾಗಿ ಕೊರೊನಾ ಸಂದರ್ಭದಲ್ಲಿ ಇತರ ರೋಗಿಗಳನ್ನು ಪರೀಕ್ಷೆ ಮಾಡುವುದು ಕಷ್ಟದ ಕೆಲಸವಾಗಿದೆ. ಆದರೆ, ಅವಧಿ ಪೂರ್ಣಗೊಳಿಸಿದ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲೇಬೇಕಾದ ಅನಿವಾರ್ಯತೆ ಇದ್ದು, ಕೊರೊನಾ ನಡುವೆ ಗರ್ಭಿಣಿಯರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸುವ ಮೂಲಕ ವೈದ್ಯರು ಮತ್ತೊಮ್ಮೆ ವೈದ್ಯೋ ನಾರಾಯಣೋ ಹರಿಃ ಎನ್ನುವ ಮಾತನ್ನು ಸಾಬೀತುಪಡಿಸಿದ್ದಾರೆ.
ಕೊರೊನಾ ಸಮಯದಲ್ಲಿ ಗರ್ಭಿಣಿಯರಿಗೆ ಆಶಾಕಿರಣವಾದ ಚಿಟಗುಪ್ಪಿ ಆಸ್ಪತ್ರೆ! - ಗರ್ಭಿಣಿಯರಿಗೆ ಸುರಕ್ಷಿತವಾಗಿ ಹೆರಿಗೆ
ಅವಧಿ ಪೂರ್ಣಗೊಳಿಸಿದ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲೇಬೇಕಾದ ಅನಿವಾರ್ಯತೆ ಇದ್ದು, ಕೊರೊನಾ ನಡುವೆ ಗರ್ಭಿಣಿಯರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸುವ ಮೂಲಕ ವೈದ್ಯರು ಮತ್ತೊಮ್ಮೆ ವೈದ್ಯೋ ನಾರಾಯಣೋ ಹರಿಃ ಎನ್ನುವ ಮಾತನ್ನು ಸಾಬೀತುಪಡಿಸಿದ್ದಾರೆ.
HBL
ರಾಜ್ಯದಲ್ಲಿ ಮೂರನೇ ಅಲೆ ಭೀತಿ ಶುರುವಾಗಿದೆ. ಸೋಂಕಿತರ ಪ್ರಮಾಣ ದಿನೇ ದಿನೆ ಹೆಚ್ಚಾಗುತ್ತಿದೆ. ಆದರೆ, ಈ ವೇಳೆ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ನೂರಾರು ಹೆರಿಗೆಗಳಾಗಿವೆ. ಇದರಲ್ಲಿ ಅತಿ ಹೆಚ್ಚು ನಗರ ಪ್ರದೇಶಗಳದ್ದೇ ಆಗಿವೆ.
ಆಸ್ಪತ್ರೆಯಲ್ಲಿ ಹೆರಿಗೆ ಮಾಡಿದರೆ, ಹೆರಿಗೆಗೆ ಬಳಕೆ ಮಾಡುವ ಯಾವುದೇ ವಸ್ತುವನ್ನು ಮತ್ತೊಬ್ಬರಿಗೆ ಹೆರಿಗೆ ಮಾಡಿಸಲು ತಕ್ಷಣವೇ ಬಳಸುವಂತಿಲ್ಲ. ಸಂಪೂರ್ಣ ಆಪರೇಷನ್ ಕೊಠಡಿಯನ್ನೇ ಸ್ಯಾನಿಟೈಸ್ ಮಾಡಲಾಗುತ್ತದೆ. ಇಂತಹ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹೆರಿಗೆ ಮಾಡಿಸುವ ಕೆಲಸ ಚಿಟಗುಪ್ಪಿಯಲ್ಲಿ ನಡೆಯುತ್ತಿದೆ.
Last Updated : Aug 6, 2021, 10:12 PM IST