ಕರ್ನಾಟಕ

karnataka

ETV Bharat / city

ಹುಬ್ಬಳ್ಳಿ: ಹೂಡಿಕೆ ಹೆಸರಲ್ಲಿ ರೈತರಿಗೆ ಮೋಸ; ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ

ಮೈಸೂರು ಹೈ ಗ್ರಾಂಟ್ ಕ್ಯಾಪಿಟಲ್ ಸಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಹೆಸರಿನಲ್ಲಿ ವಂಚಕರು ರೈತರನ್ನು ವಂಚಿಸಿದ್ದಾರೆ.

By

Published : Jul 5, 2022, 2:27 PM IST

Cheating to farmers in the name of investment
ಹೂಡಿಕೆ ಹೆಸರಲ್ಲಿ ರೈತರಿಗೆ ಮೋಸ

ಹುಬ್ಬಳ್ಳಿ: ಮೈಸೂರು ಹೈ ಗ್ರಾಂಟ್ ಕ್ಯಾಪಿಟಲ್ ಸಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಹೆಸರಿನಲ್ಲಿ ಧಾರವಾಡ, ಗದಗ, ಬೆಳಗಾವಿ ಸೇರಿ ಇತರೆ ಜಿಲ್ಲೆಗಳಲ್ಲಿ ರೈತರಿಂದ ಹೂಡಿಕೆ ಸಲುವಾಗಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ವಂಚನೆಗೊಳಗಾದವರು ಇದೀಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಷೇರು ಮಾರುಕಟ್ಟೆ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡುವುದಾಗಿ ಹೇಳಿ ವಂಚಿಸಲಾಗಿದೆ ಎಂದು ರೈತರು ದೂರಿದ್ದಾರೆ. ಸುಮಾರು 10 ರಿಂದ 15 ಕೋಟಿ ಹಗರಣ ಇದಾಗಿದೆ ಎಂದು ಆರೋಪಿಸಿದ್ದಾರೆ. ಆರೋಪಿಗಳು ಹುಬ್ಬಳ್ಳಿ ಮೂಲದವರಾಗಿದ್ದು, ಅವರನ್ನು ಬಂಧಿಸಿ ಹಣ ಕೊಡಿಸುವಂತೆ ರೈತರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.


ಕುಸುಗಲ್‌ನ ಸಿದ್ದರಾಮ, ಕೋಗಿಲಗೇರಿಯ ದ್ಯಾಮಣ್ಣ ಬಿ., ಸತೀಶ ಜೆ. ಹಾಗೂ ಇನ್ನಿತರರು ನಮ್ಮನ್ನು ವಂಚಿಸಿದ್ದಾರೆ ಎಂದು ರೈತರು ತಿಳಿಸಿದ್ದಾರೆ. ಮೊದಲು ಎಕ್ವಾಲಿಸ್ ಕಂಪನಿಯ ಗೊಬ್ಬರ, ಕೀಟನಾಶಕ ತಂದು ನಮ್ಮ ವಿಶ್ವಾಸ ಗಳಿಸಿಕೊಂಡರು. ಬಳಿಕ ಹೂಡಿಕೆ ಮಾಡಿದರೆ 1 ಲಕ್ಷಕ್ಕೆ ಪ್ರತಿ ತಿಂಗಳು 9 ಸಾವಿರ ನೀಡುವುದಾಗಿ ಹೇಳಿ ನನ್ನಿಂದ 7.50 ಲಕ್ಷ ರೂ ಪಡೆದಿದ್ದಾರೆ. ಒಂದೆರಡು ಬಾರಿ ಅದರಂತೆ ಹಣ ಪಾವತಿಸಿದರು. ಆದರೆ, 2021ರ ಅಕ್ಟೋಬರ್ ಬಳಿಕ ತಿಂಗಳಿಗೆ ಬರಬೇಕಾಗಿದ್ದ ಹಣ ನೀಡಲಿಲ್ಲ. ಹೀಗೆ ಸುಮಾರು ರೈತರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ರೈತರೋರ್ವರು ಆರೋಪಿಸಿದರು.

ಇದನ್ನೂ ಓದಿ:ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ‌: ಜ್ಯಾನಜ್ಯೋತಿ ಶಾಲೆಗೆ ಸಂಬಂಧಿಸಿದ ಚಾರ್ಜ್​ಶೀಟ್​ ಕೋರ್ಟ್​ಗೆ ಸಲ್ಲಿಕೆ

ABOUT THE AUTHOR

...view details