ಕರ್ನಾಟಕ

karnataka

ಸಾಮಾಜಿಕ ಅಂತರದ ಕಣ್ಗಾವಲಿಗೆ ಸಿಸಿಟಿವಿ, ಡ್ರೋನ್ ಚಿತ್ರೀಕರಣ: ಧಾರವಾಡ ಡಿಸಿ ಆದೇಶ

By

Published : May 1, 2020, 11:09 PM IST

ಕೋವಿಡ್-19 ಹರಡುವಿಕೆಯ ಪ್ರಮಾಣವನ್ನು ಕಡಿಮೆ ಮಾಡಲು ಸಾರ್ವಜನಿಕರ ಅಂತರ ಮುಖ್ಯ. ಈ ನಿಟ್ಟಿನಲ್ಲಿ ಮಾರುಕಟ್ಟೆಗಳ ದೈನಂದಿನ ವಿಡಿಯೋಗ್ರಾಫಿ ಅಥವಾ ಡ್ರೋನ್ ಚಿತ್ರೀಕರಣ ಪ್ರಾರಂಭಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

CCTV, drone shooting to protect social distance Dharwad DC
ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಸಿಸಿಟಿವಿ, ಡ್ರೋಣ್ ಚಿತ್ರೀಕರಣ: ಧಾರವಾಡ ಡಿಸಿ ಆದೇಶ..!

ಧಾರವಾಡ: ಕೋವಿಡ್-19 ಹರಡುವಿಕೆಯ ಪ್ರಮಾಣವನ್ನು ಕಡಿಮೆ ಮಾಡಲು ಸಾರ್ವಜನಿಕರ ಅಂತರ ಮುಖ್ಯ. ಈ ನಿಟ್ಟಿನಲ್ಲಿ ಮಾರುಕಟ್ಟೆಗಳ ದೈನಂದಿನ ವಿಡಿಯೋಗ್ರಾಫಿ ಅಥವಾ ಡ್ರೋನ್ ಚಿತ್ರೀಕರಣ ಪ್ರಾರಂಭಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಸಿಸಿಟಿವಿ, ಡ್ರೋಣ್ ಚಿತ್ರೀಕರಣ: ಧಾರವಾಡ ಡಿಸಿ ಆದೇಶ..!

ವಿಶೇಷವಾಗಿ ಹಣ್ಣು ಮತ್ತು ತರಕಾರಿ, ಕಿರಾಣಿ ಅಂಗಡಿಗಳು ಹಾಗೂ ಹಾಲಿನ ಬೂತ್​ಗಳು ಸೇರಿದಂತೆ ಆಹಾರ ಪದಾರ್ಥಗಳ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳ ದೈನಂದಿನ ವಿಡಿಯೋಗ್ರಾಫಿ ಅಥವಾ ಡ್ರೋನ್ ಚಿತ್ರೀಕರಣ ಪ್ರಾರಂಭಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳೇ ಮುಖ್ಯ. ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಖರೀದಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳದಂತೆ ನಿಗಾ ವಹಿಸಲು ಪ್ರತಿದಿನ ವಿಡಿಯೋ, ಸಿಸಿ ಟಿವಿ ಕ್ಯಾಮೆರಾ ಅಥವಾ ಡ್ರೋನ್ ಮೂಲಕ ಚಿತ್ರೀಕರಣ ಮಾಡಿ ನಿರಂತರವಾಗಿ ನಿಗಾವಹಿಸಬೇಕು ಎಂದರು.

ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಆಯುಕ್ತರು, ಎಪಿಎಂಸಿ ಕಾರ್ಯದರ್ಶಿ, ಜಂಟಿ ಕೃಷಿ ನಿರ್ದೇಶಕರು, ತೋಟಗಾರಿಕೆ ಉಪ ನಿರ್ದೇಶಕರು ಈ ಕಾರ್ಯವನ್ನು ಆದ್ಯತೆಯ ಮೇಲೆ ಕೈಗೊಳ್ಳಲು ಸೂಚಿಸಿದರು.

ABOUT THE AUTHOR

...view details