ಧಾರವಾಡ:ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ವಿರುದ್ಧದ ದೂರು ದಾಖಲು ಪ್ರಕರಣ ಕುರಿತ ಧಾರವಾಡ ಗ್ರಾಮೀಣ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು ವಿಚಾರಕ್ಕೆ ಸ್ವತಃ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದ್ದಾರೆ. ಜ. ೨೫ಕ್ಕೆ ನನ್ನ ಮೇಲೆ ದೂರು ದಾಖಲಾಗಿತ್ತು. ಈ ವಿಷಯವನ್ನು ಎಳೆದುಕೊಂಡು ಹೋಗಬಾರದು ಎಂದು ನಾ ಸುಮ್ಮನಿದ್ದೆ ಎಂದು ಹೊರಟ್ಟಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್ಪಿಯವರು ನನ್ನ ಬಳಿ ಬಂದು ಕ್ಷಮೆ ಕೇಳಿದ್ದಾರೆ. ನಾನು ಜ.೨೫ ರಂದು ಧಾರವಾಡದಲ್ಲಿ ಇರಲಿಲ್ಲ. ಈ ಹಿಂದೆಯೂ ನನ್ನ ಮೇಲೆ ಎಸ್ಸಿ/ಎಸ್ಟಿ ದೂರು ಕೂಡ ಇಲ್ಲ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು. ನಾನು ಬೆಂಗಳೂರಿನಲ್ಲಿ ಇದ್ದರು ನನ್ನ ಮೇಲೆ ಅಟ್ರಾಸಿಟಿ ದೂರು ಕೊಟ್ಟಿದ್ದರು. ಸದನದಲ್ಲಿಯೂ ಬಜೆಟ್ ವಿಚಾರ ಚರ್ಚಿಸುವಾಗ ಕೆಲ ಸದಸ್ಯರು ಈ ವಿಷಯವನ್ನು ಪ್ರಸ್ತಾಪಿಸಿದರು. ನಾನು ಸದನದಲ್ಲಿದ್ದೆ. 10 ನಿಮಿಷದ ಬಳಿಕ ನಾನು ತೆರಳಿರುವುದಾಗಿ ಹೇಳಿದ್ದಾರೆ ಎಂದರು.