ಧಾರವಾಡ: ದತ್ತ ಪೀಠದಲ್ಲಿ ಮಾಂಸದೂಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ. ದತ್ತಪೀಠ ಅಪವಿತ್ರ ಮಾಡಿದ್ದಾರೆ. ಇದನ್ನು ಖಂಡಿಸುತ್ತೇನೆ, ವಿರೋಧಿಸುತ್ತೇನೆ ಮುಜರಾಯಿ ಮತ್ತು ಪೊಲೀಸ್ ಇಲಾಖೆ ಈ ವಿಚಾರವಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿತ್ತು. ನಾವು ಹೋಮ, ಹವನ ಮಾಡುವ ಪವಿತ್ರ ಕ್ಷೇತ್ರ ಅದು, ಆ ಕ್ಷೇತ್ರ ಗಲೀಜು ಮಾಡಿದ್ದಾರೆ. ಅಲ್ಲಿ ಮಾಂಸದೂಟ ನಿಷೇಧ ಇದೆ. ಆದರೂ ಅಲ್ಲಿ ಮುಸ್ಲಿಮರು ಮಾಂಸದೂಟ ಮಾಡಿದ್ದಾರೆ ಇದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಮಾತನಾಡಿರುವ ಅವರು, ನಾನು ಅವರಿಗೆ ಬೈಯೋದಿಲ್ಲ, ಮುಜರಾಯಿ ಮತ್ತು ಪೊಲೀಸ್ ಇಲಾಖೆ ಮೇಲೆ ಜಿಲ್ಲಾಧಿಕಾರಿ ತನಿಖೆ ಮಾಡಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಶ್ರೀರಾಮ ಸೇನೆಯವರು ಅಲ್ಲಿ ಗೋಮೂತ್ರದಿಂದ ಶುದ್ಧೀಕರಣ ಮಾಡುತ್ತದೆ. ಹೀಗೆ ಮಾಡಿದಲ್ಲಿ ಇನ್ನು ಮುಸ್ಲಿಮರನ್ನು ದತ್ತ ಪೀಠಕ್ಕೆ ಪ್ರವೇಶ ಮಾಡದಂತೆ ಮಾಡಬೇಕಾಗುತ್ತದೆ. ಈ ಎಚ್ಚರಿಕೆಯನ್ನು ಅಲ್ಲಿನ ಜಿಲ್ಲಾಧಿಕಾರಿಗೆ ಕೊಡುತ್ತೇನೆ.