ಕರ್ನಾಟಕ

karnataka

ETV Bharat / city

ಧಾರವಾಡದ ಸರ್ವೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸ್ಥಾನ ವಿವಾದ: ಸಭಾಪತಿ ಹೊರಟ್ಟಿ ಸೇರಿ ಐವರ ವಿರುದ್ಧ ಕೇಸ್​ - ಸರ್ವೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗಾದಿ ವಿವಾದ

ಧಾರವಾಡ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿನ ಅಧ್ಯಕ್ಷ ಸ್ಥಾನದ ವಿವಾದ ಈಗ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಇದಕ್ಕೆ ಸಂಬಂಧಿಸಿದಂತೆ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

basavaraja-horatti-
ಬಸವರಾಜ ಹೊರಟ್ಟಿ

By

Published : Jan 27, 2022, 3:15 PM IST

ಹುಬ್ಬಳ್ಳಿ:ಧಾರವಾಡ ಸರ್ವೋದಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಸ್ಥಾನ ವಿವಾದ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ವಿರುದ್ಧ ಅಖಿಲ‌ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾವು ಧಾರವಾಡದ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದೆ. ಈ ಮೂಲಕ ಶಿಕ್ಷಣ ಸಂಸ್ಥೆಯ ವಿವಾದ ಪೊಲೀಸ್​ ಮೆಟ್ಟಿಲೇರಿದೆ.

ಕಳೆದ ಜ.22 ರಂದು ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಮಾಧ್ಯಮಗೋಷ್ಟಿ ನಡೆಸಿ, ಸಭಾಪತಿ ಬಸವರಾಜ ಹೊರಟ್ಟಿ ಸರ್ವೋದಯ ಟ್ರಸ್ಟ್​ಗೆ ಯಾವುದೇ ಚೇರ್ಮನ್ ಇಲ್ಲ. ಆದಾಗ್ಯೂ ಅವರು ರಾಜಕೀಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಧ್ಯಕ್ಷೀಯ ಅಧಿಕಾರ ಚಲಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ತುಂಬಲು ಜಾಹೀರಾತು ನೀಡಿದ್ದಾರೆ. ‌ಅವರು ಅಧಿಕೃತವಾಗಿ ಚೇರ್ಮನ್ ಆಗಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದರು.

ಅಟ್ರಾಸಿಟಿ ಕೇಸ್​ ದಾಖಲು:ಅದರಂತೆ ಅಖಿಲ‌ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಸದಸ್ಯರು ಧಾರವಾಡದಲ್ಲಿರುವ ಶಾಲೆಗಳಿಗೆ ಪರಿಶೀಲನೆಗೆಂದು ಭೇಟಿ ನೀಡಿದಾಗ ಮುಗದ ಗ್ರಾಮದಲ್ಲಿ ಬಸವರಾಜ ಹೊರಟ್ಟಿ ಅವರ ಬೆಂಬಲಿಗರು ಮಹಾಸಭಾದ ಸದಸ್ಯರ ಮೇಲೆ ಹಲ್ಲೆಗೈದಿದ್ದಾರೆ. ಅಲ್ಲದೆ, ಜಾತಿ ನಿಂದನೆ ಜೊತೆಗೆ ಕಾರು ಜಖಂಗೊಳಿಸಿದ್ದಾರೆಂದು ಆರೋಪಿಸಿ ಮೋಹನ್​ ಗುಡಸಲಮಿ ಎಂಬುವರು ಬಸವರಾಜ ಹೊರಟ್ಟಿ ಸೇರಿದಂತೆ 5 ಮಂದಿ ವಿರುದ್ಧ ಅಟ್ರಾಸಿಟಿ ಕೇಸ್​ ದಾಖಲಿಸಿದ್ದಾರೆ.

ಇದನ್ನೂ ಓದಿ:61 ಗಂಟೆಗಳ ಕಾಲ ರಂಟೆ ಹೊಡೆದ ವಿಜಯಪುರದ ರೈತನಿಗೆ ಸನ್ಮಾನ..

ABOUT THE AUTHOR

...view details