ಹುಬ್ಬಳ್ಳಿ: ಇಲ್ಲಿನ ಮಂಟೂರ ರಸ್ತೆಯ ವ್ಯಾಪ್ತಿಯಲ್ಲಿ ಅಪ್ರಾಪ್ತೆಯೊಂದಿಗೆ ವಿವಾಹವಾದ ಯುವಕನ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಟರ್ ಅಲಿ ಬನ್ನೂರ ಎಂಬಾತ 17 ವರ್ಷದ ನನ್ನ ಮಗಳನ್ನು ಜ.4ರಂದು ಪುಸಲಾಯಿಸಿ ಕರೆದುಕೊಂಡು ಹೋಗಿದ್ದ. ಬಳಿಕ ಬಾಷಾ ಪೀರಾ ದರ್ಗಾದಲ್ಲಿ ಮೌಲಾನಾ ಜಕರಿಯಾ ಹೊಸೂರ ಎಂಬಾತನ ಸಹಾಯದಿಂದ ಮದುವೆಯಾಗಿದ್ದಾನೆ.
ಹುಬ್ಬಳಿಯಲ್ಲಿ ಅಪ್ರಾಪ್ತೆಯೊಂದಿಗೆ ವಿವಾಹ: ಯುವಕನ ವಿರುದ್ಧ ಪ್ರಕರಣ ದಾಖಲು - young man married Minor girl
ಅಪ್ರಾಪ್ತೆಯನ್ನು ಯುವಕನೊಬ್ಬ ಪುಸಲಾಯಿಸಿ ಕರೆದುಕೊಂಡು ಹೋಗಿ ವಿವಾಹವಾಗಿರುವ ಕುರಿತು ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆ
ಬಳಿಕ ಮದುವೆ ಸಂದರ್ಭದಲ್ಲಿ ಚಿತ್ರೀಕರಿಸಿದ್ದ ವಿಡಿಯೋ ಇಟ್ಟುಕೊಂಡು ಬೆದರಿಸುತ್ತಿದ್ದಾನೆ ಎಂದು ಅಪ್ರಾಪ್ತೆಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಕೊರಗಜ್ಜನ ವೇಷ ಹಾಕಿ ವಿಕೃತಿ ಮೆರೆದ ವರ: ಆರೋಪಿಗಳ ವಿರುದ್ಧ ದೂರು ದಾಖಲು